ರಸ್ತೆ ದಾಟಿದ ಗಜಪಡೆ – ಆತಂಕಕ್ಕೆ ಒಳಗಾದ ವಾಹನ ಸವಾರರು

By
1 Min Read

ಚಾಮರಾಜನಗರ: ಹಾಡುಹಗಲೇ ಕಾಡಿನಲ್ಲಿರುವ ಗಜಪಡೆ ರಸ್ತೆ ದಾಡುವ ದೃಶ್ಯ ಕಂಡ ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರು ಕೆಲಕಾಲ ಆತಂಕಕ್ಕೆ ಒಳಗಾದ ಪ್ರಸಂಗ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಎಲ್ಲೆಮಾಳದ ಸಮೀಪ ನಡೆದಿದೆ.

ಕಾಡಿನಿಂದ ಬಂದ ಆನೆಗಳ ಹಿಂಡು ಹಾಡುಹಗಲೇ ರಸ್ತೆ ದಾಟಿದೆ. ಇದರಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವಾಹನ ಸವಾರರು ನಿಂತಲ್ಲಿ ನಿಂತು ಆತಂಕಕ್ಕೆ ಒಳಗಾದರು. ಕೆಲವರು ಅಲ್ಲಿಂದ ಕಾಲ್ಕಿತ್ತರು. ಇನ್ನೂ ಕೆಲವರು ಮೊಬೈಲ್‌ನಲ್ಲಿ ಆ ಒಂದು ದೃಶ್ಯವನ್ನು ಸೆರೆ ಹಿಡಿದರು.

ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಕಾಡಾನೆಗಳು ಸಂಚಾರ ಹೆಚ್ಚಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ, ಕಾಡಾನೆಗಳು ಕಾಡಿನಿಂದ ಹೊರಬರದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

Share This Article