ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಕಾಡಾನೆ

Public TV
1 Min Read

– ದೇವಸ್ಥಾನದ ಆನೆ ಅಂತ ನಮಸ್ಕಾರಕ್ಕೆ ಮುಂದಾದ ಭಕ್ತರು
– ರಾತ್ರಿ ವೇಳೆ ದೇವಾಲಯಕ್ಕೆ ಬರುವ ಭಕ್ತರಿಗೆ ಎಚ್ಚರಿಕೆ ಸೂಚನೆ

ಮಂಗಳೂರು: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಾಡಾನೆ ಬಂದು ದೇವಸ್ಥಾನದ ಸುತ್ತಮುತ್ತ ಓಡಾಡಿರುವ ಘಟನೆ ನಡೆದಿದೆ.

ದೇವಸ್ಥಾನದ ಆನೆ ಅಂತಾ ತಪ್ಪು ತಿಳಿದು ಭಕ್ತರು ನಮಸ್ಕಾರ ಮಾಡಲು ಮುಂದಾಗಿದ್ದರು. ಬಳಿಕ ಕಾಡಾನೆ ಎಂದು ತಿಳಿದು ಭಕ್ತರು ಆತಂಕಕ್ಕೆ ಒಳಗಾದರು. ಬೆಳಕು, ಬ್ಯಾಂಡ್‌ನ ಸದ್ದಿಗೆ ಆನೆ ದಿಕ್ಕಾಪಾಲಾಗಿ ಓಡಿತು.

ಕಾಡಾನೆ ಬಂದಿರುವ ವಿಚಾರ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಕಾಡಾನೆಯನ್ನು ಕಾಡಿನ ಗಡಿ ದಾಟಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಯಶಸ್ವಿಯಾದರು.

ಯಾರಿಗೂ ತೊಂದರೆ ನೀಡದೇ ಆನೆ ಕಾಡಿನ ಹಾದಿ ಹಿಡಿಯಿತು. ಆದರೂ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ರಾತ್ರಿ ವೇಳೆ ದೇಗುಲಕ್ಕೆ ಬರುವ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

ಷಷ್ಠಿ ಜಾತ್ರೆಗೆ ಕುಕ್ಕೆ ಕ್ಷೇತ್ರ ತಯಾರಾಗುತ್ತಿದೆ. ಈ ಹೊತ್ತಿನಲ್ಲೇ ಕಾಡಾನೆ ಎಂಟ್ರಿ ಕೊಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿತ್ತು.

Share This Article