ಚಾ.ನಗರ| ಜಮೀನಿಗೆ ನುಗ್ಗಿ ತೆಂಗು ಬೆಳೆ ನಾಶಪಡಿಸಿದ ಕಾಡಾನೆಗಳ ಹಿಂಡು

Public TV
1 Min Read

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಾಡಾನೆ ದಾಳಿ ಮತ್ತೆ ಮಿತಿ ಮೀರಿದೆ. ಕಾಡಂಚಿನ ಜಮೀನುಗಳಿಗೆ ನುಗ್ಗಿ ತೆಂಗು ಬೆಳೆ ನಾಶಪಡಿಸಿದೆ.

ತಾಲೂಕಿನ ಅಟ್ಟಗುಳಿಪುರದಲ್ಲಿ ಘಟನೆ ನಡೆದಿದೆ. ಶಂಕರ್ ಮಹದೇವ ಸೇರಿದಂತೆ ಐದಾರು ಮಂದಿ ರೈತರ ಜಮೀನಿಗೆ ಕಾಡಾನೆ ಗುಂಪು ಲಗ್ಗೆ ಇಟ್ಟಿವೆ. ಕಳೆದ 6 ತಿಂಗಳಲ್ಲಿ ಈಗ ಐದನೇ ಬಾರಿ ಗಜಪಡೆ ದಾಳಿ ನಡೆಸಿವೆ.

ಕಾಡಾನೆ ದಾಳಿಗೆ ರೋಸಿಹೋಗಿ ಅರಣ್ಯ ಇಲಾಖೆ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಚಾಮರಾಜನಗರದ ಗುಂಡ್ಲುಪೇಟೆ ಸರ್ಕಲ್ ಬಳಿ ಇರುವ ಅರಣ್ಯ ಕಚೇರಿಯ ಬಳಿ ಪ್ರತಿಭಟನೆ ನಡೆಯಿತು.

ಡಿಸಿಎಫ್ ಶ್ರೀಪತಿ ವಿರುದ್ಧ ರೈತರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ಸೋಲಾರ್ ಫೆನ್ಸಿಂಗ್ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸಿಕೊಡುವಂತೆ ಆಗ್ರಹಿಸಿದ್ದಾರೆ.

Share This Article