ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

Public TV
1 Min Read

ಬೆಂಗಳೂರು: ಇದು ನನ್ನ ವೈಯಕ್ತಿಕ ವಿಚಾರ. ಇದನ್ನ ನಾವು ಪರಿಹಾರ ಮಾಡಿಕೊಳ್ಳುತ್ತೇವೆ ಎಂದು ನಟ ಅಜಯ್‌ ರಾವ್‌ (Ajai Rao) ಹೇಳಿದ್ದಾರೆ.

ನಾವು ಗೌರವಯುತವಾಗಿ ಪರಿಹಾರ ಮಾಡುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗುವುದು ಬೇಡ. ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿರುವ ಪತ್ನಿ ಸ್ವಪ್ನಾ ರಾವ್ (Swapna Rao) ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನಾ (Swapna) ಇಬ್ಬರು 2014 ರ ಡಿಸೆಂಬರ್‌ನಲ್ಲಿ ಪ್ರೇಮ ವಿವಾಹವಾಗಿದ್ದರು. ಇದನ್ನೂ ಓದಿ: ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರಿಂದ ಅಜಯ್ರಾವ್ಬಾಳಲ್ಲಿ ಬಿರುಗಾಳಿ!

ಕುಟುಂಬಸ್ಥರ ಸಮ್ಮುಖದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಹೆಣ್ಣು ಮಗು ಕೂಡ ಇದ್ದು ಇಬ್ಬರು ಅನ್ಯೋನ್ಯವಾಗಿದ್ದರು.

ಇತ್ತೀಚಿಗೆ ದಂಪತಿ ಹೊಸ ಮನೆಯ ಗೃಹಪ್ರವೇಶ ಮಾಡಿದ್ದರು. ಯುದ್ಧಕಾಂಡ ಸಿನಿಮಾಕ್ಕಾಗಿ ಸಾಕಷ್ಟು ಸಾಲ ಮಾಡಿದ್ದ ಅಜಯ್ ರಾವ್ ಇದರಿಂದ ಕಂಗೆಟ್ಟಿದ್ದರು ಎನ್ನಲಾಗಿದೆ.

2003 ರಲ್ಲಿ ಬಿಡುಗಡೆಯಾದ ಎಕ್ಸ್‌ಕ್ಯೂಸ್‌ಮೀ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಅಜಯ್ ರಾವ್, ಇದೇ ವರ್ಷ ಬಿಡುಗಡೆ ಆದ ಯುದ್ಧಕಾಂಡ 2 ಸಿನಿಮಾನಲ್ಲಿ ನಟಿಸುವ ಜೊತೆಗೆ ನಿರ್ಮಾಣವನ್ನೂ ಸಹ ಮಾಡಿದ್ದರು.

Share This Article