ಪತ್ನಿಯಿಂದ ವಿಚ್ಛೇದನ – 40 ಲೀಟರ್ ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!

Public TV
1 Min Read

ದಿಸ್ಪುರ್: ಪತ್ನಿಯಿಂದ (Wife) ವಿಚ್ಛೇದನ (Divorce) ಪಡೆದ ಪತಿಯೊಬ್ಬ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ವಿಚಿತ್ರ ಘಟನೆ ಅಸ್ಸಾಂನ (Assam) ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ.

ಮಾಣಿಕ್ ಅಲಿ ಹಾಲಿನಿಂದ ಸ್ನಾನ ಮಾಡಿದ ವ್ಯಕ್ತಿ. ಸ್ನಾನದ ವಿಡಿಯೋ ಮಾಡಿಕೊಳ್ಳುತ್ತಾ, ʻನಾನು ಈಗ ಸ್ವತಂತ್ರʼ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿರುವೆ. ನಾನು ಇಂದಿನಿಂದ ನಾನು ಸ್ವತಂತ್ರ. ಶುದ್ಧೀಕರಣ ಮತ್ತು ಬಿಡುಗಡೆಯ ಸಾಂಕೇತಿಕವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಬಿಹಾರದಲ್ಲಿ ಗುಂಡಿಕ್ಕಿ ಮತ್ತೋರ್ವ ಬಿಜೆಪಿ ನಾಯಕನ ಹತ್ಯೆ

ಪತ್ನಿ ತನ್ನ ಪ್ರಿಯಕರನೊಂದಿಗೆ ಆಗಾಗ ಓಡಿಹೋಗುತ್ತಲೇ ಇದ್ದಳು. ನಾನು ನಮ್ಮ ಕುಟುಂಬದ ಗೌರವ ಹಾಗೂ ಶಾಂತಿಗಾಗಿ ಮೌನವಾಗಿದ್ದೆ. ಬಳಿಕ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆವು. ನನ್ನ ವಕೀಲರು ಕರೆ ಮಾಡಿ ವಿಚ್ಛೇದನ ಸಿಕ್ಕ ಮಾಹಿತಿ ನೀಡಿದರು ಎಂದು ಮಾಣಿಕ್‌ ಅಲಿ ಮಾಹಿತಿ ನೀಡಿದ್ದಾನೆ.

ಮಾಣಿಕ್‌ ಹಾಲಿನಲ್ಲಿ ಸ್ನಾನ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಅವನೇ ಬೇಕು ಎಂದ ಯುವತಿ – ಕೊಲೆ ಅಪರಾಧಿ ಮದ್ವೆಗೆ 15 ದಿನ ಪೆರೋಲ್‌ ನೀಡಿದ ಹೈಕೋರ್ಟ್!

Share This Article