– ಸಮೀವುಲ್ಲಾ ಸಾವು, ಜೀವನ್ಮರಣ ಹೋರಾಟದಲ್ಲಿ ಮಕ್ಕಳು
ತುಮಕೂರು: ಮೂರು ಮಕ್ಕಳ ತಾಯಿ ವಿದೇಶಕ್ಕೆ ಹಾರಿ ಮೋಜು-ಮಸ್ತಿ ಮಾಡುತ್ತಿದ್ದರಿಂದ ಇತ್ತ ಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಹೌದು. ಹೆಂಡತಿಯ ವರ್ತನೆಯಿಂದ ಬೇಸತ್ತು ಸಮೀವುಲ್ಲಾ ತನ್ನ ಮೂವರು ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸಮೀವುಲ್ಲಾ ಅವರು ತುಮಕೂರಿನಲ್ಲಿ ಪೇಯಿಂಟ್ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಮನೆಯಲ್ಲಿಯೇ ವಾಸವಿದ್ದಳು. ಆದರೆ ಅದೇಕೋ ಈಕೆಗೆ ದುಡಿಯುವ ಮನಸ್ಸಾಯ್ತೋ ಗೊತ್ತಿಲ್ಲ. ತನ್ನ ಅಕ್ಕನ ಜೊತೆ ಸೌದಿಗೆ ಹಾರಿದ್ದಾಳೆ.
ತನ್ನ ಕುಟುಂಬಕ್ಕೆ ತಿಂಗಳಿಗೊಮ್ಮೆ 10 ಸಾವಿರ ಹಣವೂ ಕಳಿಸುತ್ತಿದ್ದಳಂತೆ. ಆದರೆ ಕ್ರಮೇಣ ಹಣ ಕಳುಹಿಸುವುದನ್ನು ನಿಲ್ಲಿಸಿದ್ದಾಳೆ. ದುಡಿಮೆಗೆಂದು ಹೋದ ಸಾಹೇರಾ ಬಾನು, ಹುಕ್ಕಾ ಬಾರ್ ಡ್ಯಾನ್ಸ್ ಅಂತಾ ಮೋಜು ಮಸ್ತಿಗೆ ಇಳಿದಿದ್ದಾಳೆ. ಈ ಬಗ್ಗೆ ಅಲ್ಲಿಂದಲೇ ತನ್ನ ಪತಿ ಸಮೀವುಲ್ಲಾಗೆ ವೀಡಿಯೋ ಕಾಲ್ ಮಾಡಿ ತೋರಿಸುತ್ತಿದ್ದಳಂತೆ. ಅಲ್ಲದೆ ನಾನು ವಾಪಸ್ ಬರಲ್ಲ ಇಲ್ಲೇ ಇರುತ್ತೇನೆ, ಇಲ್ಲೆ ಚೆನ್ನಾಗಿದೆ ಅಂತಾ ಹೇಳಿ ಪತಿಗೆ ರೇಗಿಸುತ್ತಿದ್ದಳಂತೆ. ಜೊತೆಗೆ ಪ್ರಿಯಕರನೊಂದಿಗೂ ಕೂಡ ವೀಡಿಯೋ ಕಾಲ್ ಮಾಡುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ
ಯಾವಾಗ ಸಾಹೇರಾ ಬಾನು ತನ್ನ ಮೋಜು-ಮಸ್ತಿಯಲ್ಲಿ ಬಿದ್ದು ಸೌದಿಯಲ್ಲಿ ಸೆಟ್ಲ್ ಆದ್ಲೋ, ಇತ್ತ ಸಮೀವುಲ್ಲಾ ಕುಟುಂಬ ನಲುಗಿದೆ. ತನ್ನ ಮೂವರು ಮಕ್ಕಳೊಂದಿಗೆ ಸಮೀವುಲ್ಲಾ ಪಡಬಾರದ ಕಷ್ಟ ಪಟ್ಟಿದ್ದಾರೆ. ತಾನೇ ದುಡಿದು ಮಕ್ಕಳನ್ನ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿದಿನ ಕೂಡ ಸಮೀವುಲ್ಲಾ ಪತ್ನಿಗೆ ವೀಡಿಯೋ ಕಾಲ್ ಮಾಡಿದಾಗ ವಾಪಸ್ ತುಮಕೂರಿಗೆ ಬಂದು ಬಿಡು ಅಂತಾ ಗೋಗರೆದಿದ್ದಾರೆ. ಸಾಲದ್ದಕ್ಕೆ ಮಕ್ಕಳು ಕೂಡ ತಾಯಿಗೆ ಬಾ ಅಮ್ಮ ಅಂತಾ ಕರೆದಿದ್ದಾರೆ. ಆದರೂ ನವರಂಗಿ ನಾಟಕದ ಸಾಹೇರ ಬಾನು ಮನಸ್ಸು ಕರಗಿಲ್ಲ.
ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳೊಂದಿಗೆ ಸಮೀವುಲ್ಲಾ ತುಮಕೂರಿನ ಪುರೋಸ್ ಕಾಲೋನಿಯಲ್ಲಿ ವಾಸವಿದ್ದರು. ಪತ್ನಿ ಸೌದಿಗೆ ಹೋದ ಕಾರಣಕ್ಕೆ ಕಳೆದ ಆಗಸ್ಟ್ 13 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಮಕ್ಕಳ ಸಮೇತ ಸಮೀವುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 15ಕ್ಕೆ ಸಮೀವುಲ್ಲಾ ಸಾವನ್ನಪ್ಪಿದ್ದು, ಸದ್ಯ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮಕ್ಕಳು ವಿಷ ಕುಡಿಯುವ ಮುನ್ನ ತನ್ನ ತಾಯಿಗೆ ಕಳುಹಿಸಿರುವ ಆ ವಾಯ್ಸ್ ರೆಕಾರ್ಡ್‍ಗಳು ಎಂಥವರನ್ನೂ ಮೌನವಾಗಿಸುತ್ತೆ. ಇವತ್ತು ಒಂದು ದಿನ ಮಾತನಾಡು ಅಮ್ಮ ಇಂದು ಕೊನೆದಿನ, ನಾವು ನಾಲ್ಕು ಮಂದಿ ಸಾಯುತ್ತಿದ್ದೇವೆ ಎಂದು ಮಕ್ಕಳು ಹೇಳಿರುವುದನ್ನು ಕೇಳಿಸಿಕೊಂಡರೆ ಹೃದಯ ಚುರುಕ್ ಅನ್ನುತ್ತೆ. ಮಕ್ಕಳು ಅಳುವ ವಾಯ್ಸ್‍ಗೂ ತಾಯಿಯ ಹೃದಯ ಕರಗಲಿಲ್ಲ. ಅಲ್ಲದೆ ಗಂಡ ಸತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ರೂ ಕರಗದ ಸಾಹೇರಾ ಭಾನು ವಿರುದ್ಧ ಮೋಯಿದ್ದಿನ್ ಕುಟುಂಬಸ್ಥರು ಹರಿಹಾಯ್ದಿದ್ದಾರೆ.