ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ಮೂಲದ ಗಾಯತ್ರಿ (30) ಮೃತ ದುರ್ದೈವಿಯಾಗಿದ್ದು, ಪತಿ ಶಿವಕುಮಾರ್ ವಿರುದ್ಧ ಗಾಯತ್ರಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
10 ವರ್ಷಗಳ ಹಿಂದೆ ಗಾಯತ್ರಿಯನ್ನು ಶಿವಕುಮಾರ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮೈಸೂರಿನ ಆನಂದನಗರದಲ್ಲಿ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ದಂಪತಿ ವಾಸಿಸುತ್ತಿದ್ದರು. ತವರು ಮನೆಯಿಂದ ಹಣ ತರುವಂತೆ ಪತಿ ಶಿವಕುಮಾರ್ ಗಾಯತ್ರಿಗೆ ಪೀಡಿಸುತ್ತಿದ್ದನು. ಅಲ್ಲದೇ ಶಿವಕುಮಾರ್ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧವಿತ್ತು. ಈ ಎಲ್ಲಾ ಕಾರಣಗಳಿಂದ ಮನನೊಂದು ಗಾಯತ್ರಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಶಿವಕುಮಾರ್ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದಲ್ಲಿ ಈ ಘಟನೆ ನಡೆದಿದೆ.