ಸ್ಟಾರ್ಕ್‌ಗೆ 6 ವಿಕೆಟ್‌ – ಜಸ್ಟ್‌ 27 ರನ್‌ಗಳಿಗೆ ವಿಂಡೀಸ್‌ ಆಲೌಟ್‌, ಆಸೀಸ್‌ಗೆ 176 ರನ್‌ ಜಯ

Public TV
2 Min Read

ಕಿಂಗ್‌ಸ್ಟನ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ವೆಸ್ಟ್‌ ಇಂಡೀಸ್‌ (West Indies) ಕಳಪೆ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ವಿರುದ್ಧದ (Australia) ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಿಂಡೀಸ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 27 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆದ ಎರಡನೇ ತಂಡ ಎಂಬ ಕುಖ್ಯಾತಿಗೆ ವಿಂಡೀಸ್‌ ಪಾತ್ರವಾಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ ಗೆಲುವಿಗೆ 204 ರನ್‌ ಬೇಕಿತ್ತು. ಆದರೆ ಮಿಚೆಲ್ ಸ್ಟಾರ್ಕ್ ((Mitchell Starc) ಬೌಲಿಂಗ್‌ಗೆ ತತ್ತರಿಸಿದ ವಿಂಡೀಸ್‌ 14.3 ಓವರ್‌ಗಳಲ್ಲಿ 27 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಟಾರ್ಕ್ 7.3 ಓವರ್‌ ಎಸೆದು 4 ಮೇಡನ್‌ ಮಾಡಿ 9 ರನ್‌ ನೀಡಿ 6 ವಿಕೆಟ್‌ ಕಿತ್ತರು. ಸ್ಕಾಟ್‌ ಬೊಲಾಂಡ್‌ 3 ವಿಕೆಟ್‌, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್‌ ಪಡೆದರು.

ವಿಂಡೀಸ್‌ ಪರ ಜಸ್ಟಿನ್ ಗ್ರೀವ್ಸ್ 11 ರನ್‌ ಹೊಡೆದಿದ್ದೆ ಅತ್ಯಧಿಕ ಮೊತ್ತ. ಇತರೇ ಲೆಗ್‌ ಬೈ ರೂಪದಲ್ಲಿ 6 ರನ್‌ ಬಂದಿತ್ತು. 7 ಮಂದಿ ಆಟಗಾರರು 0 ಸುತ್ತಿದ್ದರಿಂದ ವಿಂಡೀಸ್‌ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ 176 ರನ್‌ಗಳ ಜಯ ಸಾಧಿಸಿದೆ. ಇದನ್ನೂ ಓದಿ: ಲಾರ್ಡ್‌ ಜಡ್ಡು ಏಕಾಂಗಿ ಹೋರಾಟ ವ್ಯರ್ಥ ಇಂಗ್ಲೆಂಡ್‌ಗೆ 22ರನ್‌ಗಳ ರೋಚಕ ಗೆಲುವು; 2-1ರಲ್ಲಿ ಸರಣಿ ಮುನ್ನಡೆ

ಈ ಪಂದ್ಯ ಸೇರಿದಂತೆ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಟಾರ್ಕ್ ಅವರು ಅರ್ಹವಾಗಿಯೇ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಮೂರು ಪಂದ್ಯಗಳ ಸರಣಿಯನ್ನು ಕ್ವೀನ್‌ಸ್ವೀಪ್‌ ಮಾಡಿದ ಆಸ್ಟ್ರೇಲಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಟೆಸ್ಟ್‌ ಕ್ರಿಕೆಟಿನಲ್ಲಿ ಕಡಿಮೆ ಮೊತ್ತಕ್ಕೆ ಔಟಾದ ಕುಖ್ಯಾತಿ ನ್ಯೂಜಿಲೆಂಡ್‌ ಹೆಸರಿನಲ್ಲಿದೆ. 1955 ರಲ್ಲಿ ಇಂಗ್ಲೆಂಡ್‌ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್‌ಗಳಿಗೆ ಆಲೌಟ್‌ ಆಗಿತ್ತು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 225 ರನ್‌
ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ 143 ರನ್‌
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 121 ರನ್‌
ವೆಸ್ಟ್‌ ಇಂಡೀಸ್‌ ಎರಡನೇ ಇನ್ನಿಂಗ್ಸ್‌ 27 ರನ್‌

Share This Article