ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ

Public TV
2 Min Read

ಬೆಂಗಳೂರು: ಡಿಕೆ ರವಿ ಮತ್ತು ಗಣಪತಿ ಪ್ರಕರಣಗಳನ್ನು ಸಮೀಕ್ಷೆಗೆ ಪರಿಗಣಿಸಿದ್ದು ಯಾಕೆ ಎಂದು ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಯನ್ನು ಪ್ರಶ್ನೆ ಮಾಡಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಅವರು, ಸಮೀಕ್ಷೆಗಳ ಫಲಿತಾಂಶಗಳು ನಿಜವಾಗುವುದಿಲ್ಲ. ಇದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ. ನಿಮ್ಮ ಸರ್ವೆಯನ್ನ ನಾನು ನೋಡಿದ್ದೇವೆ. ಅದರಲ್ಲಿ ಡಿಕೆ ರವಿ ಕೇಸ್ ಹಾಗೂ ಗಣಪತಿ ಕೇಸ್ ಸರ್ಕಾರದ ಇಮೇಜ್‍ಗೆ ಧಕ್ಕೆ ಆಗುತ್ತೆ ಎಂದು ತೋರಿಸಲಾಗಿದೆ. ಇದನ್ನು ಯಾಕೆ ಸಮೀಕ್ಷೆಗೆ ಪರಿಗಣಿಸಿದ್ದು ಎನ್ನುವುದನ್ನು ನೀವು ಹೇಳಬೇಕು ಎಂದು ಪ್ರಶ್ನಿಸಿದರು.

ಡಿಕೆ ರವಿ ಕೇಸ್ ನಲ್ಲಿ ಸಿಬಿಐ ಆತ್ಮಹತ್ಯೆ ಅಂತ ವರದಿ ಕೊಟ್ಟಿದೆ. ಗಣಪತಿ ಕೇಸ್‍ನಲ್ಲಿ ಸಿಐಡಿ ಬಿ ರಿಪೋರ್ಟ್ ನೀಡಿದೆ. ಹೀಗಾಗಿ ನೀವು ಸರ್ವೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿರೋದು ಸರಿಯಲ್ಲ. ರಾಜ್ಯದ ಜನ ಯಾವ ಸರ್ಕಾರ ಬೇಕು ಅಂತ ನಿರ್ಧಾರ ಮಾಡುತ್ತಾರೆ. ಅತಂತ್ರ ಸರ್ಕಾರ ನಿರ್ಮಾಣ ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮೆಗಾ ಸಮೀಕ್ಷೆಯನ್ನು ನಡೆಸಿತ್ತು. ಜನವರಿ 1 ಮತ್ತು 2ನೇ ತಾರೀಕಿನಂದು ಮೆಗಾ ಸಮೀಕ್ಷೆಯ ಫಲಿತಾಂಶಗಳು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು

ಈ ಮೆಗಾ ಸರ್ವೆಯಲ್ಲಿ ಜನರಿಗೆ ಯಾವ ಹಗರಣಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಹ್ಯೂಬ್ಲೋಟ್ ವಾಚ್ ಹಗರಣಕ್ಕೆ 7.69%, ಡಿಕೆ ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ 31.84%, ಪರಮೇಶ್ವರ ನಾಯ್ಕ್ ಪ್ರಕರಣಕ್ಕೆ 2.96%, ಮೇಟಿ ಲೈಂಗಿಕ ಹಗರಣಕ್ಕೆ 6.71% ಮತ್ತು ಡಿಕೆ ಶಿವಕುಮಾರ್ ಐಟಿ ದಾಳಿ ಪ್ರಕರಣಕ್ಕೆ 6.91% ಫಲಿತಾಂಶ ಸಿಕ್ಕಿತ್ತು. ಒಟ್ಟು ಮೇಲಿನ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ 30.56%, ಏನೂ ಹೇಳಲ್ಲ 12.96% ಹಾಗೂ ಇತರೆಗೆ 0.37% ಫಲಿತಾಂಶ ಸಿಕ್ಕಿತ್ತು. ಇದನ್ನು ಓದಿ:ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದ

Share This Article
Leave a Comment

Leave a Reply

Your email address will not be published. Required fields are marked *