ಶ್ರೀಲೀಲಾ ಲೆನಿನ್ ಚಿತ್ರದಿಂದ ಹೊರಬಿಳೋಕೆ ಇಲ್ಲಿದೆ ಕಾರಣ..!?

Public TV
1 Min Read

ಸೌತ್ ಬ್ಯೂಟಿ ಶ್ರೀಲೀಲಾ (Sreeleela) ಪುಷ್ಪಾ ಸಿನಿಮಾದಿಂದ ಮಾರ್ಕೆಟ್‍ನಲ್ಲಿ ಭಾರೀ ಸದ್ದು ಗದ್ದಲ ಮಾಡುತ್ತಿದ್ದರು. ಹಂಗೆನೇ ತಮ್ಮ ಸಂಭಾವನೆ ವಿಚಾರವಾಗಿಯೂ ಸಖತ್ ಸೌಂಡ್ ಮಾಡಿದ್ದರು. ಶ್ರೀಲೀಲಾ ಪುಷ್ಪ-2 ಸಿನಿಮಾದಲ್ಲಿ ವಿಶೇಷ ಸಾಂಗ್‍ವೊಂದರಲ್ಲಿ ಸೊಂಟ ಬಳಿಕಿಸಿದ್ದರು ಈ ಹಾಡಿಗಾಗಿ ಭಾರೀ ಮೊತ್ತದ ಸಂಭಾವನೆಯನ್ನ ಪಡೆದಿದ್ದರು.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಪಾತ್ರದಲ್ಲಿ ನಟಿಸಿ, ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಪುಷ್ಪ ಸಿರೀಸ್ ಜಗತ್ತಿನಾದ್ಯಂತ ಗಮನಸೆಳೆದಿತ್ತು. ಈ ಸಿರೀಸ್‍ನ ಮೊದಲ ಪಾರ್ಟ್‍ನಲ್ಲಿ ಸಮಂತಾ `ಊ ಅಂಟಾವಾ ಮಾವಾ’ ಅಂತಾ ಸ್ಪೆಷಲ್ ಸ್ಟೆಪ್ ಹಾಕಿ ಪಡ್ಡೆ ಹುಡುಗ್ರ ಹಾರ್ಟ್‍ಬೀಟ್ ಹೆಚ್ಚಿಸಿದ್ದರು. ಪಾರ್ಟ್-2 ಹಾಡಿನಲ್ಲಿ `ಕಿಸ್ಸಿಕ್’ ಅಂತಾ ಶ್ರೀಲೀಲಾ ಅಟ್ರ್ಯಾಕ್ಟ್ ಮಾಡಿದ್ರು. ಇದನ್ನೂ ಓದಿ: ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

ಪುಷ್ಪಾ-2 ಸಿನಿಮಾದ ಬಳಿಕ ಶ್ರೀಲೀಲಾ ಕೂಡಾ ತಮ್ಮ ಸಂಭಾವನೆಯನ್ನ ಡಬಲ್ ಮಾಡಿದ್ರು ಎನ್ನಲಾಗ್ತಿದೆ. ಇದೇ ಕಾರಣಕ್ಕೆ ತಮ್ಮ ಮುಂದಿನ ಸಿನಿಮಾ ಲೆನಿನ್‍ನಿಂದ (Lenin Movie) ಗೇಟ್‍ಪಾಸ್ ಸಿಕ್ಕಿದೆಯಂತೆ. ನಾಗಾರ್ಜುನ್ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸ್ತಿರುವ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಬೇಕಿತ್ತು. ಅವ್ರ ಸಂಭಾವನೆ ವಿಚಾರವಾಗಿ ಈ ಪ್ರಾಜೆಕ್ಟ್‍ನಿಂದ ಅವ್ರನ್ನ ಕೈಬಿಡಲಾಗಿದೆಯಂತೆ.

ನಟಿ ಶ್ರೀಲೀಲಾ ಜಾಗಕ್ಕೆ ಭಾಗ್ಯಶ್ರೀ ಬೋರ್ಸೆ ಅವ್ರನ್ನ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆಯಂತೆ. ಭಾಗ್ಯಶ್ರೀ ಬೋರ್ಸೆ ಈಗಾಗ್ಲೇ ತೆಲುಗು ಇಂಡಸ್ಟ್ರಿಯಲ್ಲಿ ಸಿನಿಮಾ ಮಾಡಿದ್ದಾರೆ. ಸದ್ಯ ಚಿತ್ರತಂಡ ಶ್ರೀಲೀಲಾರನ್ನ ಪ್ರಾಜೆಕ್ಟ್‌ನಿಂದ ಕೈಬಿಟ್ಟು ಭಾಗ್ಯಶ್ರೀ ಅವರನ್ನ ಸೆಲೆಕ್ಟ್ ಮಾಡಿದೆ. ಇದನ್ನೂ ಓದಿ: ಮೂರು ಮೆಗಾ ಪ್ರಾಜೆಕ್ಟ್ ಒಪ್ಪಿದ ಧ್ರುವ ಸರ್ಜಾ

Share This Article