ಆಷಾಢ ಬಳಿಕ ಸಿದ್ದರಾಮಯ್ಯ ಮನೆ ಶಿಫ್ಟ್ ವಿಚಾರ – ಮೂಢನಂಬಿಕೆಯ ಕಾಳಜಿಗಳು ಏಕೆ ಬೇಕು; ನಟ ಚೇತನ್ ಪ್ರಶ್ನೆ

By
2 Min Read

ಬೆಂಗಳೂರು: ಆಷಾಢದ (Ashadha Masa) ‘ಅಶುಭ’ ಅವಧಿಯ ನಂತರ ಹೊಸ ಮನೆಗೆ ಶಿಫ್ಟ್ ಆಗಲು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪ್ಲಾನ್ ಮಾಡಿದ್ದಾರೆ. ನಿಜವಾದ ವೈಜ್ಞಾನಿಕ ಚಿಂತಕನಿಗೆ ಇಂತಹ ಮೂಢನಂಬಿಕೆಯ ಕಾಳಜಿಗಳು ಏಕೆ ಬೇಕು ಎಂದು ನಟ ಚೇತನ್ (Chetan Kumar) ಪ್ರಶ್ನಿಸಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಿಡಿ ಕಾರುತ್ತಿದ್ದ ನಟ ಚೇತನ್, ಈಗ ಸಿದ್ದರಾಮಯ್ಯ ವಿರುದ್ಧವೂ ಕಿಡಿ ಕಾರಿದ್ದಾರೆ. ಆಷಾಢದ ಬಳಿಕ ಸರ್ಕಾರಿ ಹೊಸ ಬಂಗಲೆಗೆ ಸಿಎಂ ಸಿದ್ದರಾಮಯ್ಯ ಶಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಚೇತನ್, ಸಿಎಂ ನಡೆಗೆ ವ್ಯಂಗ್ಯವಾಡಿದ್ದಾರೆ.

ಆಷಾಢದ ‘ಅಶುಭ’ ಅವಧಿಯ ನಂತರ ಹೊಸ ಮನೆಗೆ ಶಿಫ್ಟ್ ಆಗಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ನಿಜವಾದ ವೈಜ್ಞಾನಿಕ ಚಿಂತಕನಿಗೆ ಇಂತಹ ಮೂಢನಂಬಿಕೆಯ ಕಾಳಜಿಗಳು ಏಕೆ ಬೇಕು? 2 ತಿಂಗಳ ಹಿಂದೆ ‘ದೇವರ’ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು. ಈಗ ಆಷಾಢ ಅಸಂಬದ್ಧತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚಂದ್ರಯಾನ-3 ಇದರ ಕೆಲವು ವಿಜ್ಞಾನಿಗಳ ಬೂಟಾಟಿಕೆಯ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅವಳಿನ್ನೂ ಮುಸಲ್ಮಾನಳಲ್ಲ, ಪಾಕಿಸ್ತಾನಕ್ಕೆ ಬರೋದು ಬೇಡ – ಪಾಕ್ ಮಹಿಳೆ ಪೋಷಕರ ಫಸ್ಟ್ ರಿಯಾಕ್ಷನ್

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ, ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಮೇಕೆದಾಟು ಯೋಜನೆ ಕೆಟ್ಟ ಯೋಜನೆ ಎಂದು ಜರಿದಿದ್ದರು. ಇದನ್ನೂ ಓದಿ: ಚಂದ್ರಯಾನ-3 ಯಶಸ್ವಿ ಆಗಲೆಂದು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

ಇಸ್ರೋ ವಿಜ್ಞಾನಿಗಳ ಪೂಜೆಗೂ ಚೇತನ್ ವಿರೋಧ:
ಚಂದ್ರಯಾನ-3 (Chandrayaan 3) ಗಗನನೌಕೆ ಉಡಾವಣೆಗೂ ಮುನ್ನ ಇಸ್ರೋ (ISRO) ವಿಜ್ಞಾನಿಗಳು ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಇದು ತುಂಬಾ ಅಸಂಬದ್ಧ ಮತ್ತು ಬೂಟಾಟಿಕೆ ಎಂದು ಚೇತನ್ ಟೀಕಿಸಿದ್ದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್