ಲತಾ ಮಂಗೇಶ್ಕರ್‌ ಯಾಕೆ ಮದುವೆಯಾಗಲಿಲ್ಲ – ಪ್ರೀತಿ, ವಿವಾಹ, ಮಕ್ಕಳ ಬಗ್ಗೆ ಏನು ಹೇಳ್ತಿದ್ರು ಗೊತ್ತಾ?

Public TV
1 Min Read

ನವದೆಹಲಿ: ಸಂಗೀತ ಕ್ಷೇತ್ರದಲ್ಲಿ ಖ್ಯಾತಿ, ಅಪಾರ ಅಭಿಮಾನಿ ಬಳಗ, ಗೌರವಗಳಿಗೆ ಪಾತ್ರರಾದವರು ಲತಾ ಮಂಗೇಶ್ಕರ್‌. ವೃತ್ತಿ ಬದುಕಿನ ಅಪಾರ ಖ್ಯಾತಿ ಗಳಿಸಿದ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಆಸೆ-ಆಕಾಂಕ್ಷೆಗಳನ್ನು ತೊರೆದು ಅವಿವಾಹಿತರಾಗಿಯೇ ಉಳಿಯುತ್ತಾರೆ.

ಪ್ರೀತಿ, ಮದುವೆ, ಮಕ್ಕಳ ಕುರಿತು ಗಾಯಕಿ ಲತಾ ಮಂಗೇಶ್ಕರ್‌ ಅವರ ನಿಲುವು ನಿಜಕ್ಕೂ ಕುತೂಹಲಕಾರಿ. ಅವರ ಮದುವೆ ವಿಚಾರವಾಗಿ ಹರಡಿದ್ದ ಎಷ್ಟೋ ವದಂತಿಗಳಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸುತ್ತಿದ್ದರು. ಅಂತಹ ವಿಷಯಗಳಿಗೆ ಮೌನವಹಿಸಿಬಿಡುತ್ತಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

ತಮ್ಮ ಜೀವನದಲ್ಲಿ ಅದೃಷ್ಟಶಾಲಿ ವ್ಯಕ್ತಿ ಯಾರು ಮತ್ತು ಪ್ರೀತಿ ತಮ್ಮ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ಹಂಚಿಕೊಳ್ಳುವಂತೆ ಸಂದರ್ಶನವೊಂದರಲ್ಲಿ ಕೇಳಿದಾಗ ಲತಾ ಮಂಗೇಶ್ಕರ್‌ ಅವರು, ʼಹೃದಯಕ್ಕೆ ಮಾತ್ರ ತಿಳಿದಿರುವ ಕೆಲವು ವಿಷಯಗಳಿವೆ. ನಾನು ಅದನ್ನು ಹಾಗೆಯೇ ಇಡುತ್ತೇನೆʼ ಎಂದು ಉತ್ತರಿಸಿದ್ದರು.

ಹೆಣ್ಣು ಮದುವೆಯಾಗಿ ಮಕ್ಕಳನ್ನು ಪಡೆಯದಿದ್ದರೆ ಅವರ ಜೀವನವೇ ಅಪೂರ್ಣ ಎಂಬ ಜನಾಭಿಪ್ರಾಯಗಳ ಕುರಿತು ಮಾತನಾಡಿದ್ದ ಅವರು, ಜನರು ಎಲ್ಲಾ ರೀತಿಯ ವಿಷಯಗಳನ್ನು ಮಾತನಾಡುತ್ತಾರೆ. ಆದ್ದರಿಂದ ಅವುಗಳನ್ನು ನಿರ್ಲಕ್ಷಿಸಲು ಕಲಿಯಿರಿ. ಇಲ್ಲದಿದ್ದರೆ, ಸಂತೋಷದ ಜೀವನವನ್ನು ನಡೆಸುವುದು ಕಷ್ಟವಾಗುತ್ತದೆ. ನಕಾರಾತ್ಮಕ ಮತ್ತು ಖಿನ್ನತೆಯ ಶಕ್ತಿಗಳನ್ನು ದೂರ ಇಡಬೇಕು. ನಾನು ಯಾವಾಗಲೂ ಅದನ್ನು ಮಾಡುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!

Share This Article
Leave a Comment

Leave a Reply

Your email address will not be published. Required fields are marked *