ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಕುಮಾರಸ್ವಾಮಿಗೆ ಯಾಕೆ ಚಿಂತೆ – ಸಿಎಂ ಪ್ರಶ್ನೆ

Public TV
1 Min Read

ಹುಬ್ಬಳ್ಳಿ: ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡೋದು ಹೊಸದೇನಲ್ಲ, ಈ ಹಿಂದೆ ಎಲ್ಲಾ ಪಕ್ಷಗಳಿಗೂ ಬೆಂಬಲ ಕೊಟ್ಟಿದ್ದಾರೆ. 1996ರ ಚುನಾವಣೆಯಲ್ಲಿ ನಾನು, ಕುಮಾರಸ್ವಾಮಿ (HD Kumaraswamy) ದಿವಂಗತ ಅಂಬರೀಶ್‌ ಅವರನ್ನ ಕರೆದುಕೊಂಡು ಪ್ರಚಾರ ಮಾಡಿರಲಿಲ್ವಾ? ನಮ್ಮ ಜೊತೆ ಸೂಪರ್‌ ಸ್ಟಾರ್‌ ಬಂದ್ರೆ ಇವರಿಗೇಕೆ ಚಿಂತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿಯಲ್ಲಿ (Hubballi) ಮಾತನಾಡುತ್ತಾ ನಟ ಸುದೀಪ್‌ ಬೆಂಬಲ ಕುರಿತು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕುಮಾರಸ್ವಾಮಿ ಈ ಹಿಂದೆ ಯಾವ ಸ್ಟಾರ್ ನಟರನ್ನ ನಿಲ್ಲಿಸಿರಲಿಲ್ವಾ? 1996 ರಾಮನಗರ ಉಪಚುನಾವಣೆಯಲ್ಲಿ ನಾನು ಮತ್ತು ಕುಮಾರಸ್ವಾಮಿ, ನಟ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿಸಿದ್ವಿ‌. ನಾನೇ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿದ್ದೆ. ಇದನ್ನು ಅವರು ಮರೆತುಬಿಟ್ರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಷ್ಟದ ಸಮಯದಲ್ಲಿ ನಮ್ಮನ್ನ ಕೈ ಬಿಟ್ಟಿದೆ – ಕಾಂಗ್ರೆಸ್‌ಗೆ ರಾಜೀನಾಮೆ ಘೋಷಿಸಿದ ಇನಾಮ್ದಾರ್ ಕುಟುಂಬ

ನಮ್ಮ ಜೊತೆಗೆ ಸೂಪರ್ ಸ್ಟಾರ್ ಬಂದ್ರೆ ಯಾಕೆ ಇವರಿಗೇಕೆ ಕಳವಳ. ಅವರಿಗೆ ಆತಂಕ ಇದೆ ಹಾಗಾಗಿ ಟೀಕೆ ಮಾಡ್ತೀದ್ದಾರೆ. ಅವರು ಸೋಲನ್ನ ಎದುರು ನೋಡ್ತಿದ್ದಾರೆ, ಈಗಾಗಲೇ ಗೋಡೆ ಮೇಲೆ ಸೋಲು ಕಾಣ್ತಿದೆ. ಆದರೆ ನಮಗೆ ಗೆಲುವಿನ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

ಇದೇ ವೇಳೆ ಟಿಕೆಟ್‌ ಘೋಷಣೆ ವಿಚಾರವಾಗಿ ಮಾತನಾಡಿ, ಬಿಜೆಪಿಯಿಂದ ಒಂದು ಕ್ಷೇತ್ರಕ್ಕೆ ಮೂರು ಜನರ ಹೆಸರು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ ಸಂಸದೀಯ ಮಂಡಳಿ ಸಮಿತಿಯಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Share This Article