ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣಗೆ ಶಿಕ್ಷೆ ವಿಧಿಸಿದ್ದು ಬಿಜೆಪಿಗೇಕೆ (BJP) ಮುಜುಗರ ಆಗುತ್ತೆ? ಕಾಂಗ್ರೆಸ್‌ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ (Rahul Gandhi) ಫೋಟೋ ಇದೆ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವೀಧಿಸಿದ್ದು ಬಿಜೆಪಿಗೆ ಮುಜುಗರ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ
ಧರ್ಮಸ್ಥಳ ಕೇಸ್ ಬಗ್ಗೆ ಜೋಶಿ ಹೇಳಿದ್ದೇನು?
ಶಿಕ್ಷೆ ಆಗಿದೆ, ನಮಗೆ ಮುಜುಗರ ಯಾಕೆ ಆಗುತ್ತೆ? ಕಾಂಗ್ರೆಸ್‌ನವರು ಯಾವ ಯಾವ ಅಪರಾಧಿಗಳ ಜೊತೆ ಇದ್ರು ಗೊತ್ತಾ? ಖಲಿಸ್ತಾನಿ ಟೆರರಿಸ್ಟ್ ಜೊತೆ ರಾಹುಲ್ ಗಾಂಧಿ ಫೋಟೋ ಇದೆ. ಯಾಸಿನ್ ಮಲ್ಲಿಕ್ ಜೊತೆ ಇಲ್ಲಿರುವವರ ಫೋಟೋ ಇದೆ. ಅವರದ್ದು ಸಪ್ರೇಟ್ ಪಕ್ಷ, ನಮ್ಮದು ಅಲೈನ್ಸ್ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್ – ಪಿಜಿ ಮಾಲೀಕ ಅಶ್ರಫ್ ಅರೆಸ್ಟ್
ಇನ್ನೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಮಾಡಿದ್ದಾರೆ, ತನಿಖೆ ಆಗಲಿ. ಭಾರೀ ಅಪರಾಧ ಆಗಿದೆ ಅಂತ ಮೊದಲೇ ಬಿಂಬಿಸೋದು ಸರಿಯಲ್ಲ. ವೀರೇಂದ್ರ ಹೆಗಡೆ ಅವರು ತನಿಖೆ ಮಾಡಲಿ ಅಂತ ಅಂದಿದ್ದಾರೆ, ಎಸ್‌ಐಟಿ ನೀವೇ ಮಾಡಿದ್ದೀರಿ, ಯಾಕೆ ಅವಸರ ಮಾಡ್ತೀರಿ? ಅಂದು ಹೇಳಿದರು. ಇದನ್ನೂ ಓದಿ: ಭೂಗಳ್ಳರಿಂದ ಮಳವಳ್ಳಿ ಶಾಸಕರಿಗೆ ಜೀವ ಬೆದರಿಕೆ – ಕೆಡಿಪಿ ಸಭೆಯಲ್ಲೇ ನರೇಂದ್ರಸ್ವಾಮಿ ಆತಂಕ
ಕಾಂಗ್ರೆಸ್‌ನವರು ಪಾಕಿಸ್ತಾನದಲ್ಲಿ ಹೀರೋ ಆಗ್ತಿದ್ದಾರೆ
ಕಾಂಗ್ರೆಸ್ ಪಕ್ಷ ದೇಶದ ಹಿತವನ್ನ ಮರೆತು ಪಾಕಿಸ್ತಾನವನ್ನ ಸಾಫ್ಟ್ ಆಗಿ ನೋಡ್ತಾ ಇದೆ. ಭಯೋತ್ಪಾದನೆ ಆರೋಪಗಳಿಂದ ಮುಕ್ತಗೊಳಿಸುವ ಪ್ರಯತ್ನ ಮಾಡ್ತಾ ಇದೆ. ಮಲೆಗಾವ್ ಪ್ರಕರಣದ ನಂತರದ ಘಟನೆಗಳಲ್ಲಿ ನಡೆದುಕೊಂಡದ್ದು ಗೊತ್ತಿದೆ. ತನಿಖೆ ಬಂದ್ ಮಾಡಿದ ಶರತ್ ಪವಾರ್‌ರ ಪಕ್ಷ ಹಿಂದೂ ಟೆರರ್ ಅಂತ ಹೇಳೋ ಪ್ರಯತ್ನ ಮಾಡಿದ್ರ. ಸಂಜೋತ ಹಾಗೂ ಮಲೆಗಾವ್ ಲಿಂಕ್ ಮಾಡಿದ್ರು. ಮಲೆಗಾವ್ ಬಾಂಬ್ ಸ್ಫೋಟದಲ್ಲಿ ಮುಸಲ್ಮಾನರು ಯಾಕೆ ಮಾಡ್ತಾರೆ? ಹಿಂದೂ ಟೆರೇರ್ ಅಂತ ಹೇಳಿ ಪಾಕಿಸ್ತಾನವನ್ನ ರಕ್ಷಿಸುವ ಕೆಲಸ ಮಾಡಿದ್ರು. ನಾವು ಪಾಕಿಸ್ತಾನವನ್ನ ಜಗತ್ತಿನಲ್ಲಿ ಬೆತ್ತಲೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದೆವು. ಆದ್ರೆ ಮಲೆಗಾವ್‌ದಲ್ಲಿ ಆರಂಭಿಕ ಆರೋಪಿಗಳನ್ನ ಬಿಡಿಸುವ ಕೆಲಸವನ್ನ ಕಾಂಗ್ರೆಸ್‌ನವರು ಮಾಡಿದ್ರು. ಕಾಂಗ್ರೆಸ್‌ನವರು ದೇಶದಲ್ಲಿ ಹೀರೊ ಆಗೋದನ್ನ ಬಿಟ್ಟು ಪಾಕಿಸ್ತಾನದಲ್ಲಿ ಹೀರೊ ಆಗೋಕೆ ಹೊರಟಿದ್ದಾರೆ. ಗೃಹ ಮಂತ್ರಿ ಹೇಳಿದ್ದಾರೆ ಹಿಂದೂ ಯಾವತ್ತೂ ಟೆರರಿಸ್ಟ್ ಆಗೋಕೆ ಸಾಧ್ಯವೇ ಇಲ್ಲ ಅಂತ. ಪಹಲ್ಗಾಮ್ ಉಗ್ರರು ಪಾಕಿಸ್ತಾನದವರೇ ಅಂತ ಹೇಳೋಕೆ ಏನು ಸಾಕ್ಷಿ ಅಂತ ಚಿದಂಬರಂ ಹೇಳ್ತಾರೆ. ಕಾಂಗ್ರೆಸ್ಸಿನ ಮನಸ್ಥಿತಿ ದೇಶದಲ್ಲಿ ಯಾವ ಮಟ್ಟಕ್ಕೆ ಹೋಗ್ತಾ ಇದೆ ಅನ್ನೋದನ್ನ ನೀವೇ ಯೋಚಿಸಿ ಎಂದು ಕಿಡಿ ಕಾರಿದ್ದಾರೆ.