ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಚೀನಾದಲ್ಲಿ ಅರೆಸ್ಟ್ – ಮುಂದೇನಾಯ್ತು?

Public TV
2 Min Read

ಬೀಜಿಂಗ್: ಜೂನ್ 15ರಂದು ವರ್ಕಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಸೌಹಾರ್ದ ಪಂದ್ಯಕ್ಕೆ ತೆರಳುತ್ತಿದ್ದ ವೇಳೆ ಅರ್ಜೆಂಟೀನಾ ಫುಟ್ಬಾಲ್ ತಂಡದ (Argentina Football Team) ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಬೀಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಘಟನೆ ನಡೆದಿದೆ.

ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸೌಹಾರ್ದ ಪಂದ್ಯದಲ್ಲಿ ತನ್ನ ದೇಶವನ್ನು ಮುನ್ನಡೆಸಲು ಲಿಯೋನೆಲ್ ಮೆಸ್ಸಿ ಚೀನಾಕ್ಕೆ ಆಗಮಿಸಿದರು. ಆಗ ಅವರನ್ನು ಚೀನಾದ ಬಾರ್ಡರ್ ಪೊಲೀಸರು (Chinese Border Police) ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಿದರು.

ಮೂಲಗಳ ಪ್ರಕಾರ, ಮೆಸ್ಸಿ ಅವರ ವೀಸಾ ವಿಳಂಬವಾಗಿತ್ತು. ಮೆಸ್ಸಿ ತಮ್ಮ ಅರ್ಜೆಂಟೀನಾದ ಪಾಸ್‌ಪೋರ್ಟ್ ಬದಲಾಗಿ ತಮ್ಮ ಸ್ಪ್ಯಾನಿಷ್ ಪಾಸ್‌ಪೋರ್ಟ್ನೊಂದಿಗೆ ಪ್ರಯಾಣಿಸಿದ್ದರು. ಆದರೆ ಅದು ಚೀನಾ ವೀಸಾವನ್ನು (Chinese Visa) ಹೊಂದಿರಲಿಲ್ಲ. ತಮ್ಮ ಅಜಾಗರೂಕತೆಯಿಂದಾಗಿ ಮೆಸ್ಸಿ ಚೀನಾ ಬಾರ್ಡರ್ ಪೊಲೀಸರಿಂದ ಬಂಧಿತರಾಗಿದ್ದರು. ಸುಮಾರು 30 ನಿಮಿಷಗಳ ನಂತರ ಪರಿಸ್ಥಿತಿಯನ್ನು ಬಗೆಹರಿಸಲಾಯಿತು. ಅನಂತರ ಲಿಯೋನೆಲ್ ಮೆಸ್ಸಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.

ತನ್ನ ಸ್ಪ್ಯಾನಿಷ್ ಪಾಸ್‌ಪೋರ್ಟ್ ಹಿಡಿದುಕೊಂಡು ತನ್ನ ಸಹ ಆಟಗಾರರೊಂದಿಗೆ ಮಾತನಾಡುತ್ತಿದ್ದ ಲಿಯೋನೆಲ್ ಮೆಸ್ಸಿಯನ್ನು ಹಲವು ಪೊಲೀಸ್ ಅಧಿಕಾರಿಗಳು ತಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

ಮೆಸ್ಸಿ ಫುಟ್ಬಾಲ್ ಲೋಕದಲ್ಲಿ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಅವರು ಈವರೆಗೆ ಬಾರ್ಸಿಲೋನಾ ಕ್ಲಬ್ ಪರ 778 ಪಂದ್ಯಗಳ ಮೂಲಕ ಬರೋಬ್ಬರಿ 672 ಗೋಲ್‌ಗಳನ್ನು ಬಾರಿಸಿದ್ದಾರೆ. ಮೆಸ್ಸಿ 21 ವರ್ಷದವರಿದ್ದಾಗಲೇ 8 ಗೋಲುಗಳನ್ನು ಸಿಡಿಸುವ ಮೂಲಕ ಅಸಾಧಾರಣ ಪ್ರತಿಭೆ ಪ್ರದರ್ಶಿಸಿದ್ದರು. ಜೊತೆಗೆ ಅರ್ಜೆಂಟೀನಾ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿಂದೆ ನಡೆದ ಫಿಫಾ ವಿಶ್ವಕಪ್‌ನಲ್ಲೂ ಮೆಸ್ಸಿ ಮ್ಯಾಜಿಕ್‌ನಿಂದಾಗಿಯೇ ಅರ್ಜೆಂಟೀನಾ ಕಪ್ ಗೆಲ್ಲಲು ಸಾಧ್ಯವಾಗಿತ್ತು. ಇದನ್ನೂ ಓದಿ: ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

Share This Article