ಪಾಕ್‌ ಭಯೋತ್ಪಾದನೆಯನ್ನು ಯಾಕೆ ಯುರೋಪ್‌ ರಾಷ್ಟ್ರಗಳು ಖಂಡಿಸಿಲ್ಲ – ಜೈಶಂಕರ್‌ ಪ್ರಶ್ನೆ

Public TV
2 Min Read

ವಿಯೆನ್ನಾ: ಗಡಿಯಾಚೆ ದಶಕಗಳಿಂದಲೂ ಪಾಕಿಸ್ತಾನ(Pakistan) ನಡೆಸುತ್ತಿರುವ ಭಯೋತ್ಪಾದನೆಯನ್ನು ಯಾಕೆ ಇಲ್ಲಿಯವರೆಗೆ ಯುರೋಪ್‌ ದೇಶಗಳು ಖಂಡಿಸಿಲ್ಲ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌(S Jaishankar) ಪ್ರಶ್ನಿಸಿದ್ದಾರೆ.

ಉಕ್ರೇನ್‌(Ukraine) ಮೇಲಿನ ಯುದ್ಧದ ವಿಚಾರದಲ್ಲಿ ಭಾರತದ (India)ನಿರ್ಧಾರವನ್ನು ಯುರೋಪ್‌ ರಾಷ್ಟ್ರಗಳು(European Nations) ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್‌ ಮೊದಲ ಬಾರಿಗೆ ಪಾಕಿಸ್ತಾನದ ವಿಚಾರವನ್ನು ಪ್ರಸ್ತಾಪಿಸಿ ಯುರೋಪ್‌ ರಾಷ್ಟ್ರಗಳ ಧೋರಣೆಯನ್ನು ಪ್ರಶ್ನಿಸಿ ಖಡಕ್‌ ತಿರುಗೇಟು ನೀಡಿದ್ದಾರೆ.

ಆಸ್ಟ್ರಿಯಾದ(Austria) ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಬಣ್ಣಿಸಿದರು. ಇದನ್ನೂ ಓದಿ: ನಮ್ಮದು ಬೆಸ್ಟ್‌ ಡೀಲ್‌ – ರಷ್ಯಾದಿಂದ ತೈಲ ಖರೀದಿಗೆ ಜೈಶಂಕರ್‌ ಸಮರ್ಥನೆ

ಕೆಲವು ವರ್ಷಗಳ ಹಿಂದೆ ಭಾರತದ ಸಂಸತ್ತಿನ ಮೇಲೆ ಈ ದೇಶ ದಾಳಿ ಮಾಡಿತ್ತು. ವಿದೇಶಿಯರಿದ್ದ ಮುಂಬೈ ಹೋಟೆಲ್‌ ಮೇಲೆ ದಾಳಿ ನಡೆಸಿತ್ತು. ಪ್ರತಿದಿನ ಗಡಿಯಾಚೆಗೆ ಭಯೋತ್ಪಾದಕರನ್ನು ಕಳುಹಿಸುತ್ತದೆ ಎಂದು ವಿದೇಶಾಂಗ ಸಚಿವರು ಪಾಕಿಸ್ತಾನವನ್ನು ದೂರಿದರು.

ಚೀನಾ ಭಾರತದ(China India Border Dispute) ನಡುವಿನ ಗಡಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿ, 1962 ಯುದ್ಧದ ಬಳಿಕ ಚೀನಾದ ಧೋರಣೆಯಿಂದಾಗಿ ಈಗ ಗಡಿಯಲ್ಲಿ ಶಾಂತಿ ಕದಡುತ್ತಿದೆ. ಉಪಗ್ರಹ ಚಿತ್ರದ ಮೂಲಕ ಗಡಿ ಭಾಗಕ್ಕೆ ಯಾರು ಮೊದಲು ಬಂದಿದ್ದಾರೆ ಎನ್ನುವುದು ದೃಢವಾಗುತ್ತದೆ. ಗಡಿಯಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂದು ನಮ್ಮಿಬ್ಬರ ಮಧ್ಯೆ ಒಪ್ಪಂದ ಇದೆ. ಆದರೆ ಚೀನಾ ಆ ಒಪ್ಪಂದವನ್ನು ಪಾಲನೆ ಮಾಡದ ಕಾರಣ ಈಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

ಜೈಶಂಕರ್‌ ಭಾರತದ ನಡೆಯನ್ನು ವಿಶ್ವ ವೇದಿಕೆಯಲ್ಲಿ ಸಮರ್ಥಿಸಿಕೊಳ್ಳುವುದು ಇದು ಮೊದಲನೆಯದ್ದಲ್ಲ. ಈ ಹಿಂದೆಯೂ ಸರಿಯಾಗಿ ಸಮರ್ಥಿಸಿ ತಿರುಗೇಟು ನೀಡಿದ್ದರು. ರಷ್ಯಾದಿಂದ ಭಾರತ ಮಾತ್ರ ತೈಲ ಖರೀದಿ ಮಾಡುತ್ತಿಲ್ಲ. ಯುರೋಪ್‌ ಈಗಲೂ ಗ್ಯಾಸ್‌ ಖರೀದಿ ಮಾಡುತ್ತಿದೆ. ಹೀಗಿದ್ದರೂ ಭಾರತ ಮಾತ್ರ ಟಾರ್ಗೆಟ್‌ ಯಾಕೆ ಎಂದು ಪ್ರಶ್ನಿಸಿದ್ದರು.

ತೈಲವನ್ನು(Crude Oil) ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ(Russia) ಯುದ್ಧಕ್ಕೆ ನಿಧಿ ನೀಡಿದಂತಾಗುತ್ತದೆ ಎಂಬ ಪ್ರಶ್ನೆಗೆ, ಭಾರತ ತೈಲ ಖರೀದಿಸಿ ರಷ್ಯಾಗೆ ಸಹಾಯ ಮಾಡುತ್ತದೆ ಎಂದಾದರೆ ರಷ್ಯಾದಿಂದ ಗ್ಯಾಸ್‌ ಖರೀದಿಸುತ್ತಿರುವ ಯುರೋಪ್‌ ದೇಶಗಳು ಯುದ್ಧಕ್ಕೆ ನಿಧಿ ನೀಡಿದಂತೆ ಆಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *