ಗಗನಯಾತ್ರಿಗಳು ಬಿಳಿ ಜಾಕೆಟ್‌ ಧರಿಸೋದ್ಯಾಕೆ – ಅಷ್ಟೊಂದು ಬಿಗಿ ಬಟ್ಟೆಯ ಹಿಂದಿನ ರಹಸ್ಯವೇನು?

Public TV
3 Min Read

ಭೂಮಿಯ ಮೇಲಿರುವ ಪ್ರತಿಯೊಂದು ವಸ್ತು ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದೆ. ಅದರಂತೆ ಭೂಮಿ ಆಚೆಗೂ ಇರುವ ಪ್ರತಿಯೊಂದು ಅಂಶವು ಕೂಡ ತನ್ನದೇ ಆದ ವಿಭಿನ್ನತೆಯನ್ನ ಹೊಂದಿದೆ. ಸಾಮಾನ್ಯವಾಗಿ ಹೇಳುವುದಾದರೆ ಭೂಮಿಯ ಮೇಲಿರುವ ನಾವುಗಳು ಚಳಿಗಾಲ ಬಂದಾಗ ಒಂದು ರೀತಿ ಇದ್ದರೆ, ಬೇಸಿಗೆ ಕಾಲದಲ್ಲಿ ಇನ್ನೊಂದು ರೀತಿಯಾಗಿರುತ್ತೇವೆ. ಅರ್ಥಾತ ಚಳಿ ನಮ್ಮನ್ನು ತಂಪಾಗಿರಿಸಿದರೆ, ಬೇಸಿಗೆ ಕಾಲದಲ್ಲಿ ಬಿಸಿ ವಾತಾವರಣ ಇರುತ್ತದೆ. ಪ್ರತಿಯೊಂದಕ್ಕೂ ಹೊಂದಿಕೊಳ್ಳಲು ನಾವು ಒಂದೊಂದು ರೀತಿಯ ಪ್ರಯತ್ನವನ್ನು ಪಡುತ್ತೇವೆ. ಇದೆ ಒಂದು ವೈಶಿಷ್ಟ್ಯ.

ಅದರಂತೆ ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವಿನ ಜೊತೆಗೆ ಮಾನವ ಹೊಂದಿಕೊಳ್ಳಲು ಅಥವಾ ಒಗ್ಗಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾನೆ. ಹಾಗೆ ಗಗನಯಾತ್ರಿಗಳು ಭೂಮಿಯಿಂದ ಬಾಹ್ಯಾಕಾಶಕ್ಕೆ ಹೋಗುವಾಗ ಬಿಳಿ ಬಣ್ಣದ ಜಾಕೆಟ್ ಅನ್ನು ಧರಿಸುತ್ತಾರೆ. ಅದು ತುಂಬಾ ಬಿಗಿಯಾಗಿರುತ್ತದೆ. ಯಾಕೆ ಜಾಕೆಟ್ ಧರಿಸುತ್ತಾರೆ? ಅಷ್ಟೊಂದು ಬಿಗಿ ಜಾಕೆಟ್ ಧರಿಸಲು ಕಾರಣವೇನು? ಎನ್ನುವ ಮಾಹಿತಿ ಇಲ್ಲಿದೆ.

ಭೂಮಿ ಹಾಗೂ ಭೂಮಿಯಿಂದ ಆಚೆಗೆ ವಾತಾವರಣ ವಿಭಿನ್ನವಾಗಿರುತ್ತದೆ. ಭೂಮಿಯ ಮೇಲೆ ಸೂರ್ಯ, ಚಂದ್ರ ಸೇರಿದಂತೆ ವಿಭಿನ್ನ ಅಂಶಗಳು ಇರುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಸೂರ್ಯ, ಚಂದ್ರರ ಜೊತೆಗೆ ನಕ್ಷತ್ರಗಳು, ಗ್ರಹಗಳು ಹಾಗೂ ಗೆಲ್ಯಾಕ್ಸಿಗಳು ಇರುತ್ತವೆ. ಗಾಳಿ ಇಲ್ಲದ ಈ ಪರಿಸರದಲ್ಲಿ ಮನುಷ್ಯ ಬದುಕುವುದು ತುಂಬಾ ಕಷ್ಟಕರ. ಹೀಗಿರುವಾಗ ಇಂತಹ ವಾತಾವರಣದಲ್ಲಿ ಮನುಷ್ಯನಿಗೆ ಬದುಕಲು ಅನುವು ಮಾಡಿಕೊಡುವಂತಹ ಕೆಲವು ವಸ್ತುಗಳನ್ನು ತಯಾರಿಸಲಾಗಿದೆ. ಅದರಂತೆ ಜಾಕೆಟ್ ಕೂಡ ಒಂದು.

ಪ್ರತಿ ಬಾರಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳು ಪ್ರಯಾಣಿಸುವಾಗ ವಿಭಿನ್ನ ರೀತಿಯ ದಪ್ಪದಾದ ಜಾಕೆಟ್ ಧರಿಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ನಾವು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಿಜಕ್ಕೂ ಗಗನಯಾತ್ರಿಗಳು ಬಿಳಿ ಬಟ್ಟೆಯ ದಪ್ಪದಾದ ಜಾಕೆಟ್ ಧರಿಸಲು ಕಾರಣವೇನು? ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿರಲು ಈ ಜಾಕೆಟ್ ಧರಿಸುತ್ತಾರೆ. ಇದನ್ನು ಸೂಟ್ ಎಂದು ಕರೆಯುತ್ತಾರೆ. ಈ ಜಾಕೆಟ್ 12 ರಿಂದ 14 ಪದರಗಳನ್ನು ಹೊಂದಿರುತ್ತದೆ. ಈ ಜಾಕೆಟ್ ಅನ್ನು ಬಾಹ್ಯಾಕಾಶದಲ್ಲಿ ಮಾನವನಿಗೆ ಹೊಂದಿಕೊಳ್ಳುವ ಹಾಗೆ ತಯಾರಿಸುತ್ತಾರೆ. ಬಾಹ್ಯಾಕಾಶದಲ್ಲಿನ ನಿರ್ವಾತ, ತಾಪಮಾನ ಹಾಗೂ ವಿಕಿರಣಗಳ ವಿರುದ್ಧ ಮಾನವನನ್ನು ರಕ್ಷಿಸಲು ಇದು ಕಾರ್ಯನಿರ್ವಹಿಸುತ್ತದೆ. ಪ್ರತಿಯೊಂದು ಸೂಟ್ ಕೂಡ 100 ರಿಂದ 130 ಕೆಜಿ ತೂಕವನ್ನು ಹೊಂದಿರುತ್ತದೆ. ಭೂಮಿಯು ಗುರುತ್ವಾಕರ್ಷಣ ಶಕ್ತಿಯನ್ನು ತನ್ನಲ್ಲಿ ಹಿಡಿದುಕೊಂಡಿದೆ. ಆದರೆ ಭೂಮಿಯಿಂದ ಆಚೆ ಹೋದರೆ ಅಲ್ಲಿ ಗುರುತ್ವಾಕರ್ಷಣ ಶಕ್ತಿ ಇಲ್ಲ. ಈ ಜಾಕೆಟ್ ಬಾಹ್ಯಾಕಾಶದಲ್ಲಿನ ಸೂರ್ಯನಿಂದ ಹೊರಹೊಮ್ಮುವ ಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಜೊತೆಗೆ ತಾಪಮಾನವನ್ನು ಸ್ಥಿರವಾಗಿರುಸುತ್ತದೆ ಹಾಗೂ ಉಸಿರಾಡಲು ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಬಾಹ್ಯಾಕಾಶದಲ್ಲಿ ಮಾನವನ ದೇಹದ ಮೇಲೆ ಹೆಚ್ಚಿನ ಬಲ ಬೀಳುತ್ತದೆ. ಈ ದಪ್ಪದಾದ ಜಾಕೆಟ್ ಮಾನವನ ದೇಹದ ಮೇಲೆ ಬೀಳುವ ಒತ್ತಡವನ್ನು ತಡೆಹಿಡಿಯುತ್ತದೆ. ಒತ್ತಡದ ಅನುಭವವಾಗದಂತೆ ನೋಡಿಕೊಳ್ಳುತ್ತದೆ. ಈ ರೀತಿಯ ಜಾಕೆಟ್ ಅನ್ನು ಪೈಲಟ್ಗಳು ಧರಿಸುತ್ತಾರೆ. ಸಾಮಾನ್ಯ ಉದ್ದೇಶದಿಂದ ಧರಿಸಿದರೂ ಕೂಡ ಹೆಚ್ಚಾಗಿ ಬೆಂಕಿಯ ನಿಯಂತ್ರಣಕ್ಕೆ, ಎತ್ತರದ ಪ್ರದೇಶದಲ್ಲಿ ತಾಪಮಾನ ನಿಯಂತ್ರಣಕ್ಕೆ ಇದನ್ನ ಬಳಸಲಾಗುತ್ತದೆ. ಬಾಹ್ಯಾಕಾಶದಲ್ಲಿ ಕೆಲಸ ನಿರ್ವಹಿಸುವವರು ಇದನ್ನ ಯೂನಿಫಾರ್ಮ್ ರೀತಿಯಲ್ಲಿ ಉಪಯೋಗಿಸುತ್ತಾರೆ.

ಇದರ ಹೊರತಾಗಿ ಇನ್ನೊಂದು ಬಿಗಿಯಾದ ಜಾಕೆಟ್ ಕಡಿಮೆ ಒತ್ತಡದಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಇದು ಸಂಪೂರ್ಣ ದೇಹದ ಒತ್ತಡ, ಆಮ್ಲಜನಕ ಮತ್ತು ಉಷ್ಣ ನಿಯಂತ್ರಣವನ್ನು ಮಾಡುವಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಉಡಾವಣೆ ಸಮಯದಲ್ಲಿ ಹಾಗೂ ಭೂಮಿಗೆ ವಾಪಸ್ ಆಗುವ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲದೆ ಇದನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಳಸುತ್ತಾರೆ. ಇದು ಸುಮಾರು 8 ರಿಂದ 10 ಕೆಜಿ ಇದ್ದು, ಎರಡರಿಂದ ಮೂರು ಪದರಗಳನ್ನು ಹೊಂದಿರುತ್ತದೆ. 1961ರಲ್ಲಿ ಬಾಹ್ಯಾಕಾಶಕ್ಕೆ ಹೋದ ಮೊದಲ ಮಾನವ ಯೂರಿ ಗಗಾರಿನ್ SK-1 ಎಂಬ ವಿಶೇಷ ಸೂಟ್ ಧರಿಸಿದರು. ಅದಾದ ಬಳಿಕ ಅಮೇರಿಕಾ ಹಾಗೂ ರಷ್ಯಾ ಸೂಟ್ಗಳನ್ನು ವಿನ್ಯಾಸಗೊಳಿಸಲು ಪ್ರಾರಂಭಿಸಿತು.

ಈ ಜಾಕೆಟ್ ಗಳನ್ನು ಧರಿಸುವುದ್ಯಾಕೆ?

1971ರಲ್ಲಿ ನಡೆದ ಒಂದು ದುರಂತದ ವೇಳೆ ಮೂವರು ಗಗನಯಾತ್ರಿಗಳು ಸಾವನ್ನಪ್ಪಿದರು. ಇದರಿಂದಾಗಿ ರಷ್ಯಾ ಗಗನಯಾತ್ರಿಗಳ ರಕ್ಷಣೆಗಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿತು. ಅಲ್ಲಿಂದ ಪ್ರಾರಂಭವಾದ ಇದು ಇಂದಿಗೂ ಕೂಡ ಗಗನಯಾತ್ರಿಗಳು ಜಾಕೆಟ್ ಅನ್ನು ಧರಿಸುತ್ತಾರೆ.  ಗಗನಯಾತ್ರಿಗಳು ಪ್ರತಿ ಬಾರಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವಾಗ ಈ ಜಾಕೆಟ್ ಧರಿಸುವುದು ಕಡ್ಡಾಯ. 1971ರ ಬಳಿಕ ಜಾಕೆಟ್ ಆವಿಷ್ಕಾರವಾದಾಗಿನಿಂದ ಇಂದಿನವರೆಗೂ ಜಾಕೆಟ್ ಧರಿಸುವುದು ಕಡ್ಡಾಯವಾಗಿದೆ. ಗಗನ ಯಾತ್ರಿಗಳ ರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ

Share This Article