ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ #Boycott_ChennaiSuperKings ಅಭಿಯಾನ!

Public TV
1 Min Read

ಚೆನ್ನೈ: ಐಪಿಎಲ್ ಮೆಗಾ ಹರಾಜಿನ ಬಳಿಕ ಇದೀಗ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಸ್‍ಕೆ ವಿರುದ್ಧ #Boycott_ChennaiSuperKings ಎಂಬ ಅಭಿಯಾನ ಆರಂಭವಾಗಿದೆ.

ಚೆನ್ನೈ ಸೂಪರ್ ಕಿಂಗ್ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣರನ್ನು ಖರೀದಿಸಿದೆ. ಇದನ್ನು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಅಭಿಯಾನಕ್ಕೆ ಏನು ಕಾರಣ:
ಅಭಿಯಾನ ಆರಂಭವಾಗಲು ಪ್ರಮುಖ ಕಾರಣ ಮಹೇಶ್ ತೀಕ್ಷಣ ಸಿಂಹಳೀಯ ಬೌಲರ್ ಎಂಬುದು. 2009ರಲ್ಲಿ ಎಲ್‍ಟಿಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದರು. ಇದರಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ವೈಮನಸ್ಸಿದೆ.  ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

ಇದೀಗ ತಮಿಳುನಾಡು ಮೂಲದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಂಹಳೀಯ ಬೌಲರ್ ಸೇರ್ಪಡೆ ಆಗಿರುವುದನ್ನು ಅಭಿಮಾನಿಗಳು ವಿರೋಧಿಸಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್ ಆಗ ತೊಡಗಿದೆ.

Share This Article
Leave a Comment

Leave a Reply

Your email address will not be published. Required fields are marked *