ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಗೆದ್ದವರು ಯಾರು?

Public TV
1 Min Read

ಬಳ್ಳಾರಿ: ಶತಮಾನವನ್ನು ಕಂಡಿರುವ ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಕ್ಕೆ ಮೂರು ವರ್ಷಗಳ ಅವಧಿಯ ಕಾರ್ಯಕಾರಿ ಆಡಳಿತ ಮಂಡಳಿ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯರ ತಂಡದ ಖ್ಯಾತ ನ್ಯಾಯವಾದಿ ಉಡೇದ ಬಸವರಾಜ್ (ಯುಬಿಆರ್) ತಂಡ ಭರ್ಜರಿ ಗೆಲುವು ಸಾಧಿಸಿದೆ.

ಮೂರು ದಿನಗಳ ಹಿಂದೆ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ಯುಬಿಆರ್, ಅಲ್ಲಂ ಮತ್ತು ಯುವಕರ ತಂಡ ಎಂಬ ಮೂರು ತಂಡಗಳು ಸ್ಪರ್ಧಿಸಿದ್ದು, ಒಟ್ಟಾರೆ 30 ಸೀಟುಗಳಿಗೆ 90 ಮಂದಿ ಸ್ಪರ್ಧಿಸಿದ್ದರು. ಸೋಮವಾರ ರಾತ್ರಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ನಗರದಿಂದ ಉಡೇದ ಬಸವರಾಜ್ (1496 ಮತಗಳು), ಗೋನಾಳ್ ರಾಜಶೇಖರ್ (1206), ಜಾನೆಕುಂಟೆ ಬಸವರಾಜ್ (877), ಕೋಳೂರು ಮಲ್ಲಿಕಾರ್ಜುನಗೌಡ (865), ಏಚರೆಡ್ಡಿ ಸತೀಶ್(862), ಜೆ.ಎಸ್.ಬಸವರಾಜ್ (832), ಕೆ.ರಾಮನಗೌಡ (802), ಅಂಗಡಿ ಶಶಿಕಲಾ (792), ಕೆ.ಉಮಾಶಂಕರ್ (770) ಹಾಗೂ ಡಾ.ಸೋಮೇಶ್ವರ ಪಕ್ಕೀರಪ್ಪ ಗಡ್ಡಿ (765) ಗೆಲುವನ್ನು ಸಾಧಿಸಿದ್ದಾರೆ.

ಗ್ರಾಮೀಣದಿಂದ ಚೋರನೂರು ಕೊಟ್ರಪ್ಪ (1087), ಪಿ.ಚೆನ್ನಬಸವನಗೌಡ (993), ಹರಗಿನದೋಣಿ ಮಹಾರುದ್ರಗೌಡ (834), ಕೊರ್ಲಗುಂಡಿ ಬಸವರಾಜ್ (799), ವರಕನಹಳ್ಳಿ ಮೋಹನರೆಡ್ಡಿ (793), ಅಕ್ಕಿ ಶಿವಕುಮಾರ್ (790), ಹೆಚ್.ಎಂ.ವೀರಭದ್ರಶರ್ಮ (787), ಅರವಿ ಬಸವನಗೌಡ (740), ಕೆ.ವೀರೇಶ್ ಗೌಡ (737) ಮತ್ತು ಸಾಲಿ ಸಿದ್ದಯ್ಯಸ್ವಾಮಿ (714) ಸ್ಪರ್ಧಿಸಿದ್ದರು.

ಅಲ್ಲಂ ತಂಡದಿಂದ ನಗರದಿಂದ ಅಲ್ಲಂ ಗುರುಬಸವರಾಜ್ (1144), ಕೆ.ಎಂ.ಮಹೇಶ್ವರ ಸ್ವಾಮಿ (798), ಗ್ರಾಮೀಣದಿಂದ ಎಂ.ಶರಣ ಬಸವನಗೌಡ ಹಚ್ಚೊಳ್ಳಿ (854) ಮತ್ತು ಗುಡೇಕೋಟೆ ನಾಗರಾಜ್ (773) ಸ್ಪರ್ಧಿಸಿದ್ದರು.

ಯುವಕರ ಗುಂಪಿನಿಂದ ನಗರದಿಂದ ಡಾ.ಭಾಗ್ಯಲಕ್ಷಿ (1095), ಟಿ.ವಿರೂಪಾಕ್ಷಗೌಡ (939), ಕಣ್ಣಿರಾಜಶೇಖರ್ (9795), ಸಾಹುಕಾರ್ ಸತೀಶ್ ಬಾಬು (787) ಮತ್ತು ಗ್ರಾಮೀಣ ಆರ್.ರಾಮನಗೌಡ (742) ಪಲ್ಲೇದ ಪಂಪಾಪತಿ (1017) ಅವರು ಆಯ್ಕೆಯಾಗಿದ್ದಾರೆ. ಆಯ್ಕೆಯಾದ 30 ಸದಸ್ಯರಲ್ಲಿ ಸಂಘದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದು, ಉಡೇದ ಬಸವರಾಜ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಆಯ್ಕೆಯಾದ ಹಿರಿಯ ಸದಸ್ಯರು ಅಲ್ಲಂ ಬಸವರಾಜ್, ಅರವಿ ಬಸವನಗೌಡ, ಕೆ.ಎಂ.ಮಹೇಶ್ವರ ಸ್ವಾಮಿ, ಪಲ್ಲೇದ ಪಂಪಾಪತಿ ಮತ್ತು ಮಹರುದ್ರಗೌಡರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *