11ನೇ ಸ್ಪರ್ಧಿಯಾಗಿ ದೊಡ್ಮನೆ ಕಾಲಿಟ್ಟ ಮೈಕಲ್ ಯಾರಿವರು?

Public TV
1 Min Read

ಬಿಗ್ ಬಾಸ್ ಮನೆಗೆ ಈ ಬಾರಿ ಮೈಕಲ್ ಎನ್ನುವವರು ಪ್ರವೇಶ ಮಾಡಿದ್ದಾರೆ. 11ನೇ ಸ್ಪರ್ಧಿಯಾಗಿ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಟ್ಟಿದ್ದಾರೆ. ಈ ಮೈಕಲ್ ಯಾರು ಎನ್ನುವ ಕುತೂಹಲ ಎಲ್ಲರದ್ದು. ನೈಜಿರಿಯಾ ಮತ್ತು ಕನ್ನಡದ ನೆಲದಲ್ಲಿ ಬೆಳೆದ ಮೈಕಲ್, ಬಾಸ್ಕೆಟ್ ಬಾಲ್ ಆಟಗಾರ. ಜೊತೆಗೆ ಮಾಡೆಲ್‍ ಕೂಡ.

ಹಲವಾರು ಬ್ರ್ಯಾಂಡ್ ಗಳಿಗೆ ಮಾಡೆಲಿಂಗ್ ಮಾಡಿದ ಹೆಗ್ಗಳಿಕೆ ಮೈಕಲ್ ಅವರದ್ದು. ನೈಜಿರಿಯಾದಲ್ಲಿ ಬೆಳೆದರೂ, ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಾರೆ. ಜೊತೆಗೆ ಬರ್ಗರ್ ತಯಾರಿಸುವ ಹೋಟೆಲ್ ಉದ್ಯಮದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಮೈಕಲ್. ಈ ಬಾರಿ ಬಿಗ್ ಬಾಸ್ ಗೆಲ್ಲುವ ವಿಶ್ವಾಸ ಅವರದ್ದು.

ದೊಡ್ಮನೆಗೆ ಹೋಗಲು ವಿಫಲ

ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾಲ್ (Chitral), ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು.  ದಪ್ಪ ಇದ್ದೀಯಾ ಎನ್ನುವ ಕಾರಣಕ್ಕೆ ಅವಕಾಶಗಳನ್ನು ತಪ್ಪಿಸಿಕೊಳ್ಳತೊಡಗಿದಾಗ ಜಿಮ್‌ಗೆ ಎಡತಾಕಿದ ಚಿತ್ರಾಗೆ ವರ್ಕೌಟ್ ಎನ್ನುವುದು ಅಡಿಕ್ಟ್ ಆಗಿಬಿಟ್ಟಿತು. ಬಾಡಿಬಿಲ್ಡಿಂಗ್ ಅನ್ನು ಹವ್ಯಾಸಿಕೊಂಡು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳತೊಡಗಿದರು.

 

ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಹಾಗಾಗಿ ಅವರು ಮನೆ ಒಳಗೆ ಹೋಗಲು ವಿಫಲರಾದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್