ಡಿವೋರ್ಸ್ ಬೆನ್ನಲ್ಲೇ ಬ್ರಿಟಿಷ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದರಿ?

Public TV
2 Min Read

ಮುಂಬೈ/ಲಂಡನ್‌: ನಟಿ ನತಾಶಾ (Natasa) ಜೊತೆಗಿನ ಡಿವೋರ್ಸ್ (Divorce) ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟರ್‌ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನತಾಶಾಗೆ ಗುಡ್ ಬೈ ಹೇಳಿದ್ಮೇಲೆ ಬ್ರಿಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿಕೊಂಡಿದೆ.

ಇತ್ತೀಚೆಗಷ್ಟೇ ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಂಡ್ಯ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಅವರೊಂದಿಗೆ ಕುಣಿದು ಕುಪ್ಪಳಿಸಿದ್ದರು. ಈ ಬೆನ್ನಲ್ಲೇ ಅನನ್ಯ ಪಾಂಡೆ ಅವರೊಂದಿಗೆ ಹಾರ್ದಿಕ್‌ ಲವ್ವಿ ಡವ್ವಿ ಶುರುವಾಗಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಪಾಂಡ್ಯ ಬ್ರಿಟಿಷ್‌ ಗಾಯಕಿ ಜಾಸ್ಮಿನ್‌ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ಗ್ರೀಸ್‌ನಲ್ಲಿ ವಿಹಾರ ಮಾಡುತ್ತಿದ್ದಾರೆ ಹೇಳಲಾಗುತ್ತಿದೆ. ಇದನ್ನೂ ಓದಿ: ನಾನು ತುಂಬಾ ಅದೃಷ್ಟವಂತೆ: ಜೈಲಿನಲ್ಲಿರುವ ಪವಿತ್ರಾ ನೆನೆದು ಮಗಳು ಭಾವುಕ ಪೋಸ್ಟ್

ಯಾರು ಈ ಬ್ರಿಟಿಷ್‌ ಬ್ಯೂಟಿ?
ಜಾಸ್ಮಿನ್‌ ಇಂಗ್ಲೆಂಡಿನ ಎಸೆಕ್ಸ್‌ನಲ್ಲಿ ಜನಿಸಿದ್ರೂ ಈಕೆಯ ಪೋಷಕರು ಭಾರತೀಯ ಮೂಲದವರೇ ಆಗಿದ್ದಾರೆ. ಜಾಸ್ಮಿನ್‌ ಗಾಯಕಿ ಆಗೋದಕ್ಕೂ ಮುನ್ನ ʻದಿ ಓನ್ಲಿ ವೇ ಈಸ್‌ ಎಸೆಕ್ಸ್‌ʼ ಎಂಬ ಬ್ರಿಟಿಷ್‌ ರಿಯಾಲಿಟಿ ಶೋನಲ್ಲಿ ತೊಡಗಿಸಿಕೊಂಡು, 2010ರ ವೇಳೆಗೆಲ್ಲಾ ಜನಪ್ರಿಯತೆ ಗಳಿಸಿದ್ದರು. 2012ರ ವೇಳೆಗೆ ಈ ಶೋನಲ್ಲಿ ಪೂರ್ಣಪಾತ್ರಧಾರಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಈ ಮೂಲಕ ಜನಪ್ರಿಯ ರಿಯಾಲಿಟಿ ಶೋನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇದು ಅವರು ಮನರಂಜನಾ ಉದ್ಯಮದಲ್ಲಿ ಮುಂದುವರಿಯಲು ಸಹಾಯ ಮಾಡಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

ಇಷ್ಟಕ್ಕೆ ಸುಮ್ಮನಾಗದ ಜಾಸ್ಮಿನ್‌ 2014ರಲ್ಲಿ ಯೂಟ್ಯೂಬ್‌ ಚಾನೆಲ್‌ವೊಂದನ್ನ ಪ್ರಾರಂಭಿಸಿದ್ರು, ತಮ್ಮದೇ ಹಾಡುಗಳನ್ನ ರೆಕಾರ್ಡಿಂಗ್‌ ಮಾಡಿ ಗಾಯನ ಪ್ರದರ್ಶನಗಳನ್ನು ನೀಡಲು ಶುರು ಮಾಡಿದರು. ಝಾಕ್ ನೈಟ್, ಇಂಟೆನ್ಸ್-ಟಿ ಮತ್ತು ಆಲ್ಲಿ ಗ್ರೀನ್ ಮ್ಯೂಸಿಕ್‌ನಂತಹ ಕಲಾವಿದರೊಂದಿಗೆ ಹಾಡಿ ಜನಮನ್ನಣೆ ಗಳಿಸಿದರು. ಆದ್ರೆ 2017ರಲ್ಲಿ ರಿಲೀಸ್‌ ಆದ ʻಬೊಮ್ ಡಿಗ್ಗಿ ಡಿಗ್ಗಿʼ ಆಲ್‌ಬಂಬ್‌ ಸಾಂಗ್‌ ಜಾಸ್ಮಿನ್‌ ಅವರ ಲೈಫ್‌ ಕರಿಯರ್‌ಗೆ ದೊಡ್ಡ ತಿರುವು ಕೊಟ್ಟಿತ್ತು. ಝಾಕಾ ನೈಟ್‌ ಅವರೊಂದಿಗೆ ಹಾಡಿದ ಈ ಗೀತೆ ಸಿಕ್ಕಾಪಟ್ಟೆ ಹಿಟ್‌ ಆಯ್ತು. ಇದರಿಂದ 2018ರಲ್ಲಿ ʻಸೋನು ಕೆ ಟಿಟು ಕಿ ಸ್ವೀಟಿʼ ಬಾಲಿವುಡ್‌ ಚಿತ್ರದಲ್ಲಿ ಹಾಡುವ ಚಾನ್ಸ್‌ ಗಿಟ್ಟಿಸಿಕೊಂಡರು. ಆ ನಂತರ ಗಾಯಕಿಯಾಗಿ ಗುರುತಿಸಿಕೊಂಡರು.

ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ 6.48 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಜಾಸ್ಮಿನ್‌, 5.7 ಲಕ್ಷ ಯುಟ್ಯೂಬ್‌ ಸಬ್‌ಸ್ಕ್ರೈಬರ್ಸ್‌ಗಳನ್ನ ಹೊಂದಿದ್ದಾರೆ. ಇತ್ತೀಚೆಗೆ ಬಿಕಿನಿ ಫ್ಯಾಷನ್‌ಗೆ ಹೆಸರು ವಾಸಿಯಾಗಿದ್ದಾರೆ. ಸದ್ಯ ಇವರಿಬ್ಬರು ರಿಲೇಷನ್‌ಶಿಪ್‌ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

2024ರ ಟಿ20 ವಿಶ್ವಕಪ್‌ ಬಳಿಕ ಹಾರ್ದಿಕ್‌ ಪಾಂಡ್ಯ ಅವರು ನಟಿ ನತಾಶಾ ಅವರೊಂದಿಗಿನ ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ್ದರು.  ಇದನ್ನೂ ಓದಿ: ಶ್ರೀದೇವಿ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಜೊತೆ ಜಾನ್ವಿ ಕಪೂರ್ ಟೆಂಪಲ್ ರನ್

Share This Article