ಮೋದಿಯೊಂದಿಗೆ ಸ್ವಚ್ಛಾಂಜಲಿಯಲ್ಲಿ ಭಾಗಿಯಾಗಿದ್ದ ಅಂಕಿತ್ ಬೈಯನ್‍ಪುರಿಯಾ ಯಾರು?

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗಾಂಧಿ ಜಯಂತಿ (Gandhi Jayanti) ಮುಂಚಿನ ದಿನವಾದ ಇಂದು (ಅ.1) ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಪಾಲ್ಗೊಂಡಿದ್ದ ಫಿಟ್‍ನೆಸ್ ಪರಿಣಿತ ಅಂಕಿತ್ ಬೈಯನ್‍ಪುರಿಯಾ (Ankit Baiyanpuria) ಕೂಡ ಪಾಲ್ಗೊಂಡಿದ್ದರು. ಈ ವೀಡಿಯೋವನ್ನು ಪ್ರಧಾನಿಗಳು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಅಂಕಿತ್ ಬೈಯನ್‍ಪುರಿಯಾ ಯಾರು?
ಅಂಕಿತ್ ಬೈಯಾನ್‍ಪುರಿಯ ಅಲಿಯಾಸ್ ಅಂಕಿತ್ ಸಿಂಗ್ ಅವರು ಹರಿಯಾಣ ಮೂಲದ ಫಿಟ್‍ನೆಸ್ ಪರಿಣತರಾಗಿದ್ದಾರೆ. ಅವರು ದೇಸಿಯ ಶೈಲಿಯ ಕಸರತ್ತಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು ಮಾನಸಿಕ ಆರೋಗ್ಯಕ್ಕಾಗಿ 75 ದಿನಗಳ ಚಾಲೆಂಜ್ ಎಂಬ ವಿಷಯದಿಂದ ಉತ್ತಮ ಹೆಸರು ಗಳಿಸಿದ್ದಾರೆ. ಅಲ್ಲದೇ ಅವರು ದೇಸಿ ಶೈಲಿಯ ಮಾಜಿ ಕುಸ್ತಿಪಟು ಆಗಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ಸ್ವಚ್ಛಾಂಜಲಿ ಅರ್ಪಿಸಿದ ಮೋದಿ

 

ಅವರ ಫಿಟ್‍ನೆಸ್ ಚಾಲೆಂಜ್ ವಿಚಾರ ಅಮೆರಿಕನ್ ವಾಣಿಜ್ಯೋದ್ಯಮಿ ಆಂಡಿ ಫ್ರಿಸೆಲ್ಲಾ ಅವರಿಂದ ಸ್ಫೂರ್ತಿ ಪಡೆದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಫಿಟ್‍ನೆಸ್ ಕುರಿತು ನನ್ನ ವೈಯಕ್ತಿಕ ಸಂಶೋಧನೆಯ ಸಮಯದಲ್ಲಿ ಆಂಡಿ ಫ್ರಿಸೆಲ್ಲಾ ಅವರ 75 ದಿನಗಳ ಹಾರ್ಡ್ ಚಾಲೆಂಜ್‍ನ ವೀಡಿಯೊವನ್ನು ನೋಡಿದ್ದೆ. ನನ್ನ ವ್ಯಾಯಾಮದಲ್ಲಿ ಇದೇ ರೀತಿಯ ತಂತ್ರಗಳನ್ನು ಅಳವಡಿಸಲು ಮತ್ತು ಪರಿಚಯಿಸಲು ನಾನು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಅಂಕಿತ್ ಅವರು ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್‍ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್‍ನಲ್ಲಿ 28 ದಿನಗಳಲ್ಲಿ ಹತ್ತು ಲಕ್ಷದಿಂದ 30.7 ಲಕ್ಷ ಫಾಲೋವರ್ಸ್‍ಗಳನ್ನು ಪಡೆದಿದ್ದಾರೆ.

ಅವರು ಸಂದರ್ಶನವೊಂದರಲ್ಲಿ ತಮ್ಮ ಅನುಯಾಯಿಗಳಿಗೆ “ದೈಹಿಕ ಶಕ್ತಿಯನ್ನು ಮಾತ್ರ ನೋಡಬಾರದು, ಮಾನಸಿಕ ಶಕ್ತಿಗೂ ಆಧ್ಯತೆ ಕೊಡಬೇಕು. ಅದು ಅಧ್ಯಾತ್ಮದ ಮೂಲಕ ಮಾತ್ರ ಬರುತ್ತದೆ. ಅದಕ್ಕಾಗಿ ಭಗವದ್ಗೀತೆ ಓದಬೇಕು ಮತ್ತು ಧ್ಯಾನ ಮಾಡಬೇಕು ಎಂದು ಹೇಳಿದ್ದರು. ಅಂಕಿತ್ ಅವರ ತಂದೆ ಕೃಷಿಕರಾಗಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್