ಮೋದಿ ಮೋದಿ ಎಂದು ಕೂಗಿ ಓಡಾಡುವ ಜನ ದೇಶ ಬಿಟ್ಟು ಹೋಗಿ: ಶಿವರಾಜ್ ತಂಗಡಗಿ

Public TV
1 Min Read

ಕೊಪ್ಪಳ: ಪ್ರಧಾನಿ ಮೋದಿಗೆ ಮಾನ ಮರ್ಯಾದೆ ಇಲ್ಲ, ಮೋದಿ ಮೋದಿ ಎಂದು ಕೂಗುವ ಜನ ದೇಶ ಬಿಟ್ಟು ಹೋಗಿ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಜಿಲ್ಲೆಯ ಅಶೋಕ ವೃತ್ತದ ಬಳಿ ಮಾತಾನಾಡಿದ ಅವರು ರಾಜ್ಯದಲ್ಲಿ ಮೋದಿ ಮೋದಿ ಎಂದು ಕೂಗಿ ಓಡಾಡುವ ಜನ ದೇಶ ಬಿಟ್ಟು ತೊಲಗಬೇಕು. ಮೋದಿಯೇ ಖೊಟಾನೋಟನ್ನು ಬಿಜೆಪಿ ಕಾರ್ಯಕರ್ತರ ಮನೆಗೆ ಕಳಿಸಿದ್ದಾರೆ ಎಂದು ಆರೋಪಿಸಿದರು.

ನೀವು ದೇಶ ಆಳಲು ಸಮರ್ಥರಿಲ್ಲ, ದೇಶ ಬಿಟ್ಟು ತೊಲಗಬೇಕು. ಚುನಾವಣೆಯಲ್ಲಿ ಚಾಣಕ್ಯ, ಮೋದಿ ಬಂದು ವೋಟ್ ಹಾಕಲ್ಲ. ಮೋಸದಿಂದ ರಾಜ್ಯದಲ್ಲಿ 104 ಸೀಟ್ ಗೆದ್ದಿದ್ದೀರಿ ಎಂದು ವ್ಯಂಗ್ಯವಾಡಿದರು.

ದೇಶದಲ್ಲಿ ಏನ್ ಮಾಡೋದಕ್ಕೂ ಈ ಬಿಜೆಪಿ ಹೇಸುವುದಿಲ್ಲ. ನರೇಂದ್ರ ಮೋದಿ ದೇಶ ಬಿಟ್ಟ ಹೋಗ್ತಾರೆ ಅಂತಾ ನನಗೆ ಅನಸುತ್ತೆ ಎಂದು ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Share This Article
3 Comments

Leave a Reply

Your email address will not be published. Required fields are marked *