ಕೋಟಿ ಸರದಾರರ ಮೇಲೆ ಬೆಟ್ಟದಷ್ಟು ನಿರೀಕ್ಷೆ – ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌-5 ಬ್ಯಾಟರ್ಸ್‌ ಯಾರು?

Public TV
2 Min Read

ದುಬೈ: ವಿಶ್ವದ ಶ್ರೀಮಂತ ಟೂರ್ನಿ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಗೆ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಅಲ್ಲದೇ ಮಿಚೆಲ್‌ ಸ್ಟಾರ್ಕ್‌ ಸೇರಿದಂತೆ ದುಬಾರಿ ಬೆಲೆಗೆ ಬಿಕರಿಯಾದ ಟಾಪ್‌ ಆಟಗಾರರ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆಯಿದೆ. 17ನೇ ಆವೃತ್ತಿಯಲ್ಲಿ 10 ತಂಡಗಳು ಕಣಕ್ಕಿಳಿಯುತ್ತಿದ್ದು, ಪ್ರತಿ ತಂಡಕ್ಕೂ ಎಂದಿನಂತೆ 14 ಲೀಗ್‌ ಪಂದ್ಯಗಳಿರಲಿವೆ. ಲೀಗ್‌ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ಪ್ಲೇ ಆಫ್‌ ತಲುಪಲಿವೆ. ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ದುಬಾರಿ ಬೆಲೆಗೆ ಹರಾಜಾದ ಟಾಪ್‌-5 ಆಟಗಾರರು ಯಾರು?
* ಮಿಚೆಲ್‌ ಸ್ಟಾರ್ಕ್‌ – 24.75 ಕೋಟಿ ರೂ. (ಕೋಲ್ಕತ್ತಾ ನೈಟ್‌ರೈಡರ್ಸ್‌)
* ಪ್ಯಾಟ್‌ ಕಮ್ಮಿನ್ಸ್‌ – 20.50 ಕೋಟಿ ರೂ. (ಸನ್‌ ರೈಸರ್ಸ್‌ ಹೈದರಾಬಾದ್‌)
* ಡೇರಿಲ್‌ ಮಿಚೆಲ್‌ – 14 ಕೋಟಿ ರೂ. (ಚೆನ್ನೈ ಸೂಪರ್‌ ಕಿಂಗ್ಸ್‌)
* ಅಕ್ಷರ್‌ ಪಟೇಲ್‌ – 11.75 ಕೋಟಿ ರೂ. (ಪಂಜಾಬ್‌ ಕಿಂಗ್ಸ್‌)
* ಅಲ್ಝಾರಿ ಜೋಸೆಫ್‌ – 11.50 ಕೋಟಿ ರೂ. (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು)

ಟ್ರೇಂಡ್‌ ವಿಂಡೋ ನಿಯಮದ ಮೂಲಕ ಖರೀದಿಸಿದ ದುಬಾರಿ ಆಟಗಾರರು:
* ಕ್ಯಾಮರೂನ್‌ ಗ್ರೀನ್‌ – 17.5 ಕೋಟಿ ರೂ. (ಮುಂಬೈ ಇಂಡಿಯನ್ಸ್‌ನಿಂದ ಆರ್‌ಸಿಬಿಗೆ)
* ಹಾರ್ದಿಕ್‌ ಪಾಂಡ್ಯ – 15 ಕೋಟಿ ರೂ. (ಗುಜರಾತ್‌ ಟೈಟಾನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ);

2023ರ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಮಾರಾಟವಾಗಿದ್ದು ಐಪಿಎಲ್‌ನಲ್ಲಿ ಇತಿಹಾಸವಾಗಿತ್ತು. ಆದ್ರೆ 2024ರ ಟೂರ್ನಿಗೆ ಕಳೆದ ಡಿಸೆಂಬರ್‌ 19 ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ, ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಮಾರಾಟವಾಗಿ ಸ್ಯಾಮ್‌ ಕರ್ರನ್‌ ದಾಖಲೆ ಮುರಿದಿದ್ದರು. ಆದ್ರೆ 2023ರ ಏಕದಿನ ವಿಶ್ವಕಪ್ ವಿಜೇತ ತಂಡದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸ್ಟಾರ್‌ ವೇಗಿ ಮಿಚೆಲ್‌ ಸ್ಟಾರ್ಕ್‌ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡದ ಪಾಲಾಗಿ ದಾಖಲೆ ಬರೆದರು.

ಸ್ಟಾರ್ಕ್‌ ದುಬಾರಿಯಾಗಿದ್ದು ಏಕೆ?
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ್ದ ಮಿಚೆಲ್‌ ಸ್ಟಾರ್ಕ್‌ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ 3 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

Share This Article