ಮೆಜೆಸ್ಟಿಕ್‌-ಮಲ್ಲೇಶ್ವರ 3 ತಿಂಗಳು ರಸ್ತೆ ಬಂದ್‌

1 Min Read

ಬೆಂಗಳೂರು: ಮೆಜೆಸ್ಟಿಕ್‌ನಿಂದ (Majestic) ಮಲ್ಲೇಶ್ವರದ ಮಂತ್ರಿಮಾಲ್‌ವರೆಗಿನ (Malleshwaram Mantri Mall) ರಸ್ತೆಗೆ ವೈಟ್‌ ಟ್ಯಾಪಿಂಗ್‌ ನಡೆಯಲಿರುವ ಕಾರಣ ಮೂರು ತಿಂಗಳು ಬಂದ್‌ ಆಗಲಿದೆ.

ಬಿ ಸ್ಮೈಲ್ ಕಡೆಯಿಂದ ವೈಟ್ ಟಾಪಿಂಗ್ (White Taping) ಕಾಮಗಾರಿ ಕೈಗೊಂಡಿದ್ದು ಮುಂದಿನ ಮೂರು ತಿಂಗಳು ರಸ್ತೆ ಬಂದ್‌ ಆಗಲಿರಲಿದೆ. ಬಂದ್‌ ಆಗಿರುವುದರಿಂದ ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಓಕುಳಿಪುರಂ ಅಂಡರ್ ಪಾಸ್ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂ ಪ್ರವೇಶ ಮಾಡಬೇಕಿದೆ ಹೀಗಾಗಿ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಸ್ತಿ ಆಗಲಿದೆ. ಇದನ್ನೂ ಓದಿ: ಬೆಂಗಳೂರಿನ 500 ಕಿ.ಮೀ ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ

ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್‌ ಆಗಿರುವ ಕಾರಣ ಪೀಕ್‌ ಅವಧಿಯಲ್ಲಿ ಮಲ್ಲೇಶ್ವರಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.
Share This Article