ವಿಜಯಪುರ: ನನಗೆ ಮರಾಠಿ ಬರಲ್ಲ ಕ್ಷಮಿಸಿ ಎಂದು ಬೆಳಗಾವಿಯ ಮಹಾರಾಷ್ಟ್ರದ ಗಡಿ ಭಾಗದ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದು ವಿವಾದ ಸೃಷ್ಟಿ ಮಾಡುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯನವರು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
ನಾನು ಕನ್ನಡಿಗ, ಕನ್ನಡಕ್ಕೆ ಬದ್ಧತೆ ಇಟ್ಟುಕೊಂಡಿರುವ ನಾಯಕ, ನನ್ನಂತಹ ಬದ್ಧತೆ ಇರುವ ನಾಯಕ ಸಿಗುವುದು ಕಷ್ಟ. ನನ್ನ ಬದ್ಧತೆ ಬಗ್ಗೆ ಮಾತನಾಡುವವರು, ಅವರು ಹಿಂದಿ ವಿರೋಧಿ ಅಂತಾ ಹೇಳಲಿ. ಇಂತಹ ನಾಟಕಗಳನ್ನು ಆಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಸಿಎಂ ತಿರುಗೇಟು ನೀಡಿದರು. ಇದನ್ನೂ ಓದಿ:ಮರಾಠಿ ಬರೋಲ್ಲ ಕ್ಷಮಿಸಿ ಅಂತ ಸಿಎಂ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ: ಪ್ರತಾಪ್ ಸಿಂಹ ಕಿಡಿ
ಅಮಿತ್ ಶಾ ಜೈನ್ ಆಗಿದ್ದು ಹಿಂದೂ ಎಂದು ಹೇಳುತ್ತಾರೆ. ಬಿಜೆಪಿಯವರು ಸತ್ಯವನ್ನು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿ, ಜೆಡಿಎಸ್ ಈ ಬಾರಿ ಗೆಲ್ಲುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಮತ್ತೊಮ್ಮೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಚಾಮುಂಡೇಶ್ವರಿಯಲ್ಲಿ ಐದು ಬಾರಿ ಗೆದ್ದಾಗ ಅಮಿತ್ ಶಾ ಬಂದಿದ್ದರಾ ಎಂದು ಪ್ರಶ್ನೆ ಮಾಡಿದರು.
ಲಿಂಗಾಯತ ಪ್ರತ್ಯೆಕ ಧರ್ಮದ ವಿಚಾರ ಒಂದು ಸಮಸ್ಯೆ ಅಲ್ಲ. ಅನಂತಕುಮಾರ್ ಸೇರಿದಂತೆ ಇತರರು ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ತಪ್ಪಿಸಿದ್ದಾರೆ. ಬಿಜೆಪಿ ಅವರು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟರೆ ಬೇರೇನು ಇಲ್ಲ ಎಂದು ಟೀಕಿಸಿದರು.
ಅಮಿತ್ ಶಾ ಕುಮಾರಸ್ವಾಮಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿ ನನಗೆ ಬಂದ ಮಾಹಿತಿ ಪ್ರಕಾರ ಶಾ ಹಾಗೂ ಕುಮಾರಸ್ವಾಮಿ ದೆಹಲಿಯಲ್ಲಿ ಭೇಟಿ ಆಗಿದ್ದಾರೆ. ನಾನು ಹಾಗೂ ಜಮೀರ್ ಅಹ್ಮದ್ ಎಲ್ಲಿಯೂ ಹೋಗಿಲ್ಲ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗಬೇಕಾದ್ರೆ ವೀಸಾ ಬೇಕು. ವೀಸಾ ಇಲ್ಲದೇ ಪಾಕಿಸ್ತಾನಕ್ಕೆ ಹೋಗಲಿಕ್ಕೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ