ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ (Dharmasthala Mass Burial Case) ಹೂತಿಟ್ಟ ನಿಗೂಢ ಪ್ರಕರಣದ ಉತ್ಖನನ ಕಾರ್ಯವನ್ನು ವಿಶೇಷ ತನಿಖಾ ತಂಡ (SIT) ತಾತ್ಕಾಲಿಕವಾಗಿ ಕೈಬಿಟ್ಟಿದ್ದು ದೂರುದಾರನನ್ನು (Mask Man) ತೀವ್ರ ವಿಚಾರಣೆ ನಡೆಸುತ್ತಿದೆ.
ಕಳೆದ ಜುಲೈ 29 ರಂದು ಆರಂಭಗೊಂಡು 15 ದಿನಗಳ ಕಾಲ 17 ಜಾಗದಲ್ಲಿ ನಡೆದ ಉತ್ಖನನದ ವೇಳೆ ಅನಾಮಿಕ ಮಾಸ್ಕ್‌ಮ್ಯಾನ್ ಹೇಳಿದಂತೆ 6ನೇ ಜಾಗ ಬಿಟ್ಟರೆ ಬೇರೆ ಎಲ್ಲೂ ಏನೂ ಸಿಗದ ಕಾರಣ ಎಸ್‌ಐಟಿ ಅಧಿಕಾರಿಗಳು ಉತ್ಖನನ ಕಾರ್ಯವನ್ನು ಅಂತ್ಯಗೊಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಬಾಂಬ್
6ನೇ ಪಾಯಿಂಟ್‌ನಲ್ಲಿ ಮೂಳೆಗಳು ಸಿಕ್ಕಿದ್ದನ್ನು ಬಿಟ್ಟರೆ, ಎಸ್‌ಐಟಿಗೆ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಅನಾಮಿಕ ದೂರುದಾರ ಇನ್ನೂ 13 ಪಾಯಿಂಟ್‌ಗಳು ಬಾಕಿ ಇದೆ ಅಂತ ಹೇಳಿದರೂ ಗುಂಡಿ ಶೋಧವನ್ನು ಕೈಬಿಟ್ಟು ದೂರುದಾರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾಸ್ಕ್ ಮ್ಯಾನ್‌ನನ್ನು ಬೆಳ್ತಂಗಡಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಸಂಜೆಯವರೆಗೆ ಗ್ರಿಲ್ ಮಾಡಿದ್ದಾರೆ.
ತಲೆ ಬುರುಡೆ ತಂದ ಸ್ಥಳದಲ್ಲಿ ಸೋಮವಾರ ಮಹಜರು ನಡೆಸಲಿದ್ದು ಬಳಿಕ ತನಿಖೆಯನ್ನು ಎಸ್‌ಐಟಿ ಮುಂದುವರಿಸಲಿದೆ. 2010 ರಲ್ಲಿ ಕಲ್ಲೇರಿಯಲ್ಲಿ ಬಾಲಕಿಯ ಶವ ಹೂತಿದ್ದಾಗಿ ಹೇಳಿದ ದೂರುದಾರ ಉತ್ಖನನ ನಡೆಸಿದಾಗ ಕಳೇಬರ ಸಿಗದೇ ಇದ್ದಾಗ ಸ್ಥಳೀಯರನ್ನು ಕೇಳಿ ಎಂದು ವಾದಿಸಿದ್ದ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ
ಶವ ಹೂತ ನಂತರ ಕುಡಿಯಲು ನೀರು, ಸಲಕರಣೆಗಳನ್ನು ತೊಳೆಯಲು ಸ್ಥಳೀಯ ಮನೆಗೆ ಹೋಗಿದ್ದಾಗಿ ಆತ ಹೇಳಿದ್ದ. ಹೀಗಾಗಿ ಸ್ಥಳೀಯರನ್ನು ಎಸ್‌ಐಟಿ ವಿಚಾರಣೆ ಒಳಪಡಿಸಿದೆ. ಮುಸುಕುದಾರಿಯ ಮನವಿಯಂತೆ ವಿಚಾರಣೆ ಸಂದರ್ಭದಲ್ಲಿ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ. ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆ ಬಗ್ಗೆ ಅನಾಮಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗುತ್ತಿದೆ.