ಗೃಹಲಕ್ಷ್ಮಿ ಗ್ಯಾರಂಟಿ ಗದ್ದಲ – ಸೆಪ್ಟೆಂಬರ್ ಹಣ ಎಲ್ಲಿ?

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಈಗ ಗೃಹಲಕ್ಷ್ಮಿ ಗ್ಯಾರಂಟಿ (Gruhalakshmi Guarantee) ಗದ್ದಲ ಶುರುವಾಗಿದೆ. ಅಕ್ಟೋಬರ್ ತಿಂಗಳ ಮೊದಲ 10 ದಿನ ಕಳೆದರೂ ಸೆಪ್ಟೆಂಬರ್ ತಿಂಗಳ ಕಂತಿನ ಹಣವನ್ನು (Money) ಈವರೆಗೂ ಜಮೆ ಮಾಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಈವರೆಗೂ ರಾಜ್ಯ ಸರ್ಕಾರ ಕೇವಲ ಆಗಸ್ಟ್ ತಿಂಗಳ ಹಣವನ್ನು ಮಾತ್ರ ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ಸೆಪ್ಟೆಂಬರ್‌ ತಿಂಗಳ ಹಣ ಬಿಡುಗಡೆಯಾಗದೇ ಇರುವುದನ್ನು ಬಿಜೆಪಿ (BJP) ಪ್ರಶ್ನಿಸಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.   ಇದನ್ನೂ ಓದಿ: 2023ರ ಜಿಡಿಪಿ ದರ: ಚೀನಾಗೆ ಮತ್ತೆ ಶಾಕ್‌-ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಬೆಳವಣಿಗೆ ದಾಖಲಿಸಲಿದೆ ಭಾರತ

 

ಸರ್ಕಾರಿ ಹಣ ಖರ್ಚು ಮಾಡಿ ವೈಭವದ ಪ್ರಚಾರದಿಂದ ಆರಂಭವಾದ ಗೃಹಲಕ್ಷ್ಮಿ ಯೋಜನೆ ಎರಡೇ ತಿಂಗಳಿಗೆ ಸ್ಥಗಿತಗೊಂಡಿರುವುದು ನುಡಿದಂತೆ ನಡೆಯಲಾರದ ಕಾಂಗ್ರೆಸ್‌ ಸರ್ಕಾರದ (Congress Government) ವಾಸ್ತವದ ಅನಾವರಣ. ಮಹಿಳೆಯರಿಗೆ ಬೆಲೆ ಏರಿಕೆ ಹೊರೆ ಕಡಿಮೆ ಮಾಡಲು ನೀಡುತ್ತೇವೆಂದ ಸಿದ್ದರಾಮಯ್ಯ ಸರ್ಕಾರದಿಂದ 2,000 ರೂ. ಮಾಸಿಕ ಮೋಸದ ಜತೆಗೆ ಬೆಲೆ ಏರಿಕೆಯೂ ಉಚಿತ ಎಂದು ಕಿಡಿಕಾರಿದೆ.

ಈ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2,280 ಕೋಟಿ ರೂ. ಹಣ ಜಮೆ ಮಾಡಲಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ 9.44 ಲಕ್ಷ ಮಂದಿ ಖಾತೆಗೆ ಹಣ ಹೋಗಿಲ್ಲ. ಅಕ್ಟೋಬರ್ 4ರವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲಾ 2 ಸಾವಿರ ರೂಪಾಯಿ ವರ್ಗಾಯಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್