ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ – ಮುಂಬೈನಿಂದ ಗೋವಾಗೆ ಓಡಿಹೋದ ಕಂಪ್ಲಿ ಎಂಎಲ್‍ಎ

Public TV
1 Min Read

ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರು ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಹೌದು. ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿರೋ ರೌಡಿ ಗಣೇಶ್, ಪೊಲೀಸರು ಫೋನ್ ಟ್ರ್ಯಾಪ್ ಮಾಡುವಷ್ಟರಲ್ಲಿ ಸ್ವಿಚ್ಛ್ ಆಫ್ ಮಾಡುತ್ತಾರಂತೆ. ಅಲ್ಲದೇ ಪದೇ ಪದೇ ಫೋನ್ ನಂಬರ್ ಬದಲಿಸ್ತಿದ್ದಾರಂತೆ. ಈ ಮೂಲಕ ಪೊಲೀಸರಿಗೆ ಸಿಗದಂತೆ ಗಣೇಶ್ ಓಡಾಡುತ್ತಿದ್ದಾರೆ.

ಮುಂಬೈನ ಖಾಸಗಿ ಹೊಟೇಲ್ ನಲ್ಲಿದ್ದ ಗಣೇಶ್ ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ಸಂಪರ್ಕ ಹೊಂದಿದ್ದರು. ಮುಂಬೈನ ಹೋಟೆಲ್ ನಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗರ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಗಣೇಶ್ ಬಂಧನಕ್ಕೆ ಮುಂದಾಗಿದ್ರು. ಆದ್ರೆ ಈ ವೇಳೆ ಗಣೇಶ್ ಹೋಟೆಲ್ ನಿಂದ ಗೋವಾಕ್ಕೆ ಎಸ್ಕೇಪ್ ಆಗಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಗೋವಾದಲ್ಲಿ ಶೋಧಕಾರ್ಯ ನಡೆಸಿದ್ದಾರೆ.

ಒಂದೆಡೆ ಕೈ ನಾಯಕರಿಂದ ರಾಜೀ ಸಂಧಾನದ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಕಮಲ ನಾಯಕರು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೋಮವಾರ ನಿರೀಕ್ಷಣಾ ಜಾಮೀನಿಗೆ ಗಣೇಶ್ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ.

ಜನವರಿ 20 ರಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=zFS05gjT06E

https://www.youtube.com/watch?v=G6pvtwbmf3g

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *