– ಆರ್ಎಸ್ಎಸ್ನಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ ಅಂತ ಪುಸ್ತಕ ಬರೆದಿದ್ದಾರೆ
– ಶಾಲೆಗಳಲ್ಲಿ ಆರ್ಎಸ್ಎಸ್ನಿಂದಾಗುತ್ತಿರುವ ಬ್ರೇನ್ ವಾಷಿಂಗ್ ನಿಲ್ಲಲೆಂದು ಆಕ್ರೋಶ
ಬೆಂಗಳೂರು: ಆರ್ಎಸ್ಎಸ್ ಬ್ಯಾನ್ (RSS Ban) ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಸರ್ಕಾರಿ ಶಾಲೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ಬೇಡ ಎಂದು ಹೇಳಿದ್ದೇನೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಇಲ್ಲೊಮ್ಮೆ ನೋಡಿ @PriyankKharge !
ಇಂದು ನೀವು ಆರೆಸ್ಸೆಸ್ ವಿರುದ್ಧ ವಿಷ ಕಾರುತ್ತಾ ಸಂಘದ ಚಟುವಟಿಕೆ “ನಿಷೇಧಿಸಬೇಕು” ಎಂದು ಹೇಳುತ್ತಿದ್ದೀರ. ಆದರೆ 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದ ಸಮರಸತಾ ಸಂಗಮ ಕಾರ್ಯಕ್ರಮದ ಸಮಯದಲ್ಲಿ, ಅಂದು ಗೃಹಸಚಿವರಾಗಿದ್ದ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಆ ಶಿಬಿರಕ್ಕೆ ಭೇಟಿ… https://t.co/rCjUtLvk5y pic.twitter.com/kTdiNm9weu
— BJP Karnataka (@BJP4Karnataka) October 12, 2025
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್ಎಸ್ಎಸ್ ಬ್ಯಾನ್ ಮಾಡಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? ಅಂತ ಪ್ರಶ್ನೆ ಮಾಡಿದ್ದಾರೆ. ಸಂಘ ರಿಜಿಸ್ಟರ್ ಆಗಿದ್ದರೆ ಕಾಪಿ ಕೊಡಲಿ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು 55 ವರ್ಷ ಬೇಕಾಯಿತು ಎಂದರಲ್ಲೇ ಮುನಿರತ್ನ ಗಣವೇಶ ಹಾಕಿಕೊಂಡು, ಗಾಂಧಿಜಿ ಫೋಟೋ ಹಿಡಿದುಕೊಂಡು ಪ್ರತಿಭಟಿಸಿದ್ದು ಹಸ್ಯಾಸ್ಪದ ಅವರಿಗೆ ಆರ್ಎಸ್ಎಸ್ ಇತಿಹಾಸ ಗೊತ್ತಿಲ್ಲ ಅನ್ನಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ | ಆರ್ಎಸ್ಎಸ್ ಕಚೇರಿಗೆ ಪೊಲೀಸರಿಂದ ಬಿಗಿ ಭದ್ರತೆ
Dear dimwits at @BJP4Karnataka, in case your memory fails you,
Sri. Kharge ji was the Home Minister at the time.He visited the RSS event site after chairing a peace committee meeting with officials and representatives of all communities, to caution your people against… https://t.co/UJqZpgAQd6
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 13, 2025
ಮುಖದ ಮೇಲೆ ಉಗಿದಿದ್ದಾರೆ ಖರ್ಗೆ
ಇನ್ನೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಗೃಹ ಸಚಿವರಾಗಿದ್ದಾಗ ಆರ್ಎಸ್ಎಸ್ ಕಚೇರಿಗೆ ಹೋಗಿದ್ದಾರೆ ಅಂತ ಫೋಟೋ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೃಹ ಸಚಿವರಾಗಿ ಅವರು ಅಲ್ಲಿ ಹೋಗಿ ತಾಕೀತು ಮಾಡಿದ್ದರು. ಶಿವಾಜಿನಗರ ಸೆನ್ಸಿಟಿವ್ ಏರಿಯಾ ಇಲ್ಲಿ ಬಾಲ ಬಿಚ್ಚಿದ್ರೆ ಹುಷಾರ್ ಅಂತ ಮುಖದ ಮೇಲೆ ಉಗಿದಿದ್ದಾರೆ. ಅದನ್ನ ಹೇಳಲ್ಲ ಇವರು ಅಂದಿನ ಪೊಲೀಸ್ ಅಧಿಕಾರಿಗಳ ಜೊತೆಗೆ ಹೋಗಿದ್ದರು, ಶಾಖೆಗೆ ಹೋಗಿದ್ದಲ್ಲ ತಾಕೀತು ಮಾಡೋಕೆ ಹೋಗಿದ್ದು ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: RSS ಚಟುವಟಿಕೆ ಬ್ಯಾನ್ಗೆ ಸಚಿವ ಪ್ರಿಯಾಂಕ್ ಪತ್ರ – ಇತ್ತ ಕಾಂಗ್ರೆಸ್ ಶಾಸಕರ ಶಾಲೆಯಲ್ಲೇ ಪಥಸಂಚಲನ
Sri @BYVijayendra avare,
The problem with BJP is simple, the RSS feeds you alternate history on your WHATSAPP and none of you bother reading real history.
Let’s start with your party’s ideological godfather, Savarkar.
He didn’t call India a Motherland, he called it a… https://t.co/az5WY6zIKs
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 12, 2025
ಆರ್ಎಸ್ಎಸ್ಗೆ ಗಾಂಧಿ ಕೊಂದ ಇತಿಹಾಸ ಇದೆ
ಆರ್ಎಸ್ಎಸ್ಗೆ (RSS) ಇತಿಹಾಸ ಇದೆ ಎಂಬ ಡಿಕೆಶಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ಅದರದ್ದೇ ಇತಿಹಾಸ ಇದೆ, ಅದು ಸುಳ್ಳಿನ ಇತಿಹಾಸ. ಅದನ್ನ ಆರ್ಎಸ್ಎಸ್ನವರು ಪಾಸಿಟಿವ್ ಆಗಿ ತಗೊಂಡಿದಾರೆ ಅಷ್ಟೇ. ಸುಳ್ಳಿನ ಇತಿಹಾಸ, ಗಾಂಧಿ ಕೊಂದ ಇತಿಹಾಸ ಇದೆ. ದೇಶದಲ್ಲಿ ಕೋಮು ವಿಷ ಬೀಜ ಬಿತ್ತಿದ ಇತಿಹಾಸ ಇದೆ. ಅವರಿಗೆ ಇತಿಹಾಸ ಗೊತ್ತಿಲ್ಲದಿದ್ರೆ ನಾನು ಇತಿಹಾಸದ ಪಾಠ ಮಾಡುತ್ತೇನೆ ಎಂದು ಕುಟುಕಿದ್ದಾರೆ.
ಕೇರಳ ಹುಡುಗನ ಇನ್ಸ್ಟಾ ಗ್ರಾಮ್ ನೋಡಲಿ
ಆರ್ಎಸ್ಎಸ್ನಲ್ಲಿ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಉತ್ತರಿಸಿ, ಕೇರಳದ ಹುಡುಗ ಮಾಡಿದ್ದ ಅವನ ಇನ್ ಸ್ಟ್ರಾಗ್ರಾಮ್ ನೋಡಿದ್ರೆ ಗೊತ್ತಾಗುತ್ತೆ. ರಾಜ್ಯದಲ್ಲೂ ಒಬ್ಬರು ಪುಸ್ತಕ ಬರೆದಿದ್ದರು, ಹನುಮೇ ಗೌಡ ಅಂತ ಆರ್ಎಸ್ಎಸ್ನಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ ಅಂತ ಬರೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ನಿಷೇಧಕ್ಕೆ ಪ್ರಿಯಾಂಕ್ ಖರ್ಗೆ ಪತ್ರ – ಸರ್ಕಾರದ ನಡೆಯ ಮೇಲೆ ನಿಗಾ ಇಡಲು ಬಿಜೆಪಿ ಸಮಿತಿ ರಚನೆ