ಅಣುಬಾಂಬ್‌ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್‌ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್‌ ಸಂತೋಷ್‌

Public TV
1 Min Read

ಬೆಂಗಳೂರು: ಪಾಕಿಸ್ತಾನದ ಜೊತೆ ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ದ ಅಂತ ತೋರಿಸಿಕೊಟ್ಟವರು ಅಟಲ್ ಜೀ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿಎಲ್‌ ಸಂತೋಷ್ ಹೇಳಿದ್ದಾರೆ.

ಟೌನ್ ಹಾಲ್‌ನಲ್ಲಿ ನಡೆದ ವಾಜಪೇಯಿರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಾಜಪೇಯಿ ಅವರ ಸ್ಮರಣೆ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಅಣುಬಾಂಬ್ ಪರೀಕ್ಷೆ ಮಾಡಿದಾಗ ಅಂದು ಅಮೆರಿಕ ವಿರೋಧ ಮಾಡಿತ್ತು. ವಿಶ್ವವೇ ನಮ್ಮನ್ನ ವಿರೋಧ ಮಾಡುವ ಹೆದರಿಕೆ ಹಾಕಿದಾಗ ಇನ್ನು 2 ಬಾಂಬ್ ಪರೀಕ್ಷೆ ಮಾಡಿ ಅಂತ ಹೇಳಿದವರು ಅಟಲ್ ಅಂತ ನೆನಪಿಸಿಕೊಂಡರು.ಇದನ್ನೂ ಓದಿ: ಆರ್‌ಎಸ್‌ಎಸ್ಭಾರತದ ತಾಲಿಬಾನ್‌: ಬಿಕೆ ಹರಿಪ್ರಸಾದ್

 

ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿ ಮಾತಾನಾಡಿದ್ದಕ್ಕೆ ಇಲ್ಲಿ ಸಿದ್ದರಾಮಯ್ಯ ವಟವಟ ಅಂತ ಟ್ವೀಟ್ ಮಾಡಿದ್ದಾರೆ. ನೀವು ಎಷ್ಟೇ ಟ್ವೀಟ್ ಮಾಡಿದರೂ ವೈಚಾರಿಕ, ಸೈದ್ಧಾಂತಿಕವಾಗಿ ಬಿಜೆಪಿ ಜೊತೆ ಆರ್‌ಎಸ್‌ಎಸ್ ಇದ್ದೇ ಇರುತ್ತದೆ. ಮುಖ್ಯಮಂತ್ರಿ ಸ್ಥಾನ ಸಿಗದ್ದಕ್ಕೆ ಬೇರೆ ಪಕ್ಷಕ್ಕೆ ಹೋಗುವುದು. ಈಗ ಇಳಿಸುತ್ತಾರೆ ಎಂದು ಬೇರೆ ಪ್ಲ್ಯಾನ್ ಮಾಡುವ ಕೆಲಸ ಬಿಜೆಪಿಯಲ್ಲಿ ಆಗುವುದಿಲ್ಲ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಅಶೋಕ್, ಚಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದಗೌಡ, ತೇಜಸ್ವಿನಿ ಅನಂತ್ ಕುಮಾರ್ ಭಾಗಿಯಾಗದ್ದರು.

Share This Article