5,8,9 ತರಗತಿಗೆ ಪರೀಕ್ಷೆ ಯಾವಾಗ? – ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು

Public TV
1 Min Read

ಬೆಂಗಳೂರು: 5, 8, 9  ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ (Public Exam) ವಿಚಾರದಲ್ಲಿ ಮಕ್ಕಳ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡುತ್ತಿದ್ಯಾ ಎಂಬ ಅನುಮಾನ ಮೂಡಿದೆ. ಪರೀಕ್ಷೆ ಇದೆಯೋ? ಇಲ್ಲವೋ ಗೊಂದಲದಲ್ಲಿ ವಿದ್ಯಾರ್ಥಿಗಳಿದ್ದಾರೆ. ಸುಪ್ರಿಂ ಕೋರ್ಟ್‌ನಲ್ಲಿ (Supreme Court) ಪರೀಕ್ಷೆಗೆ ತಡೆ ನೀಡಿದ ಬಳಿಕ ಶಿಕ್ಷಣ ಇಲಾಖೆ (Education Department) ಯಾವುದೇ ಮಾಹಿತಿ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ (Students) ಯಾವುದೇ ಸಂದೇಶ ನೀಡದೇ ಗೊಂದಲ ಉಂಟಾಗಿದೆ.

ಮಾರ್ಚ್ 11ರಿಂದ ಮಾರ್ಚ್ 18ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಮಾರ್ಚ್ 11 ಮತ್ತು 12 ಎರಡು ದಿನ ಎರಡು ವಿಷಯಗಳ ಪರೀಕ್ಷೆ ನಡೆದ ಬಳಿಕ ಪರೀಕ್ಷೆಗೆ ತಡೆ ನೀಡಲಾಗಿದೆ. 5ನೇ ತರಗತಿಗೆ ಎರಡು ವಿಷಯಗಳ ಪರೀಕ್ಷೆ ಮಾತ್ರ ಬಾಕಿ ಉಳಿದಿದೆ. 8 ಮತ್ತು 9ನೇ ತರಗತಿಗಳಿಗೆ ಇನ್ನೂ 4 ವಿಷಯಗಳ ಪರೀಕ್ಷೆ ಬಾಕಿ ಇದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಫೋಟೋ ಹೊಂದಿದ್ದ 73 ಕುಕ್ಕರ್ ವಶಕ್ಕೆ ಪಡೆದ ಅಧಿಕಾರಿಗಳು

 

ಬಾಕಿ ವಿಷಯಗಳ ಪರೀಕ್ಷೆ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಶಿಕ್ಷಣ ಇಲಾಖೆಯ ವರ್ತನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಮಾಹಿತಿ ಕೇಳಲು ಕರೆಗಳನ್ನು ಮಾಡಿದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕರೆಯನ್ನೂ ಸ್ವೀಕಾರ ಮಾಡುತ್ತಿಲ್ಲ. ಇದನ್ನೂ ಓದಿ: INDIA ಗೆದ್ದರೆ ಮೇಕೆದಾಟು ಯೋಜನೆಗೆ ತಡೆ: ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ

 

Share This Article