ಮೈಸೂರು: ಅಂತರರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶೇಷವಾಗಿ ವೀಲ್ ಚೇರ್ ಜಾಥಾ ನಡೆಸಲಾಯಿತು.
ಜೆ.ಎಸ್.ಎಸ್ ದೈಹಿಕ ವೈದ್ಯಕೀಯ ಮತ್ತು ಪುನರ್ವಸತಿ ಕೇಂದ್ರ ಹಾಗೂ ಜೆ.ಎಸ್.ಎಸ್ ಫಿಸಿಯೋಥೆರಪಿ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜೆ.ಎಸ್.ಎಸ್ ಮಹಾವಿದ್ಯಾಪೀಠದ ಬಳಿಯಿಂದ ಆರಂಭಗೊಂಡ ವೀಲ್ ಚೇರ್ ಜಾಥಾ ಜೆ.ಎಸ್.ಎಸ್ ಆಸ್ಪತ್ರೆಯ ರಾಜೇಂದ್ರ ಸಭಾಂಗಣದ ಬಳಿ ಮುಕ್ತಾಯವಾಯಿತು.
ವೀಲ್ ಚೇರ್ ಜಾಥಾದಲ್ಲಿ ನೂರಾರು ಮಂದಿ ಖುಷಿಯಿಂದ ಭಾಗಿಯಾಗಿದ್ದರು. ಅದರಲ್ಲೂ ಅಂಗವಿಕರು ತಮಗಿರುವ ವೈಫಲ್ಯವನ್ನು ಮೆಟ್ಟಿನಿಂತು, ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಸಾರ್ವಜನಿಕರ ಗಮನ ಸೆಳೆಯಿತು.