ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

Public TV
2 Min Read

ಮುಂಬೈ: ಒಪ್ಪಿಗೆ ಪಡೆಯದೆ ತ್ರಿಬಲ್ ಎಕ್ಸ್ ಹೆಸರಿನ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನು ಸೇರಿಸಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಕಾರ್ಪೇಂಟರ್ ಮುಸ್ತಾಕ್ ಅಲಿ ಶೈಖ್ (24) ಬಂಧಿತ ಆರೋಪಿ. ಮುಸ್ತಾಕ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಂಬೈನ ಮಾತುಂಗಾ ಠಾಣೆಯ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಏನಿದು ಪ್ರಕರಣ?:
ತ್ರಿಬಲ್ ಎಕ್ಸ್ ಹೆಸರಿನ ಗ್ರೂಪ್‍ಗೆ ಅಡ್ಮಿನ್ ಆಗಿದ್ದ ಮುಸ್ತಾಕ್ ಮುಂಬೈ ಮೂಲದ ಮಹಿಳೆಯನ್ನು ಸೇರಿಸಿದ್ದಾನೆ. ಗ್ರೂಪ್ ಸೇರಿದ ಮಹಿಳೆ ಮೊದಲ ಕೆಲವು ಅಶ್ಲೀಲ ಮೆಸೇಜ್ ನೋಡಿ ಯಾರೋ ಗ್ರೂಪ್‍ನಲ್ಲಿ ಚೇಷ್ಟೆ ಮಾಡುತ್ತಿದ್ದಾರೆ ಅಂತಾ ತಿಳಿದಿದ್ದರು. ಆದರೆ ಸೆಕ್ಸ್ ಸಂದೇಶಗಳು, ನೀಲಿ ಚಿತ್ರಗಳು ಗ್ರೂಪ್‍ನಲ್ಲಿ ಹರಿದಾಡಿದ್ದರಿಂದ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದಾರೆ.

ನಾನು ಗ್ರೂಪ್ ಸದಸ್ಯರ ಲಿಸ್ಟ್ ನೋಡಿದಾಗ ಯಾರೊಬ್ಬರೂ ನನಗೆ ಪರಿಚಯ ಇಲ್ಲದವೇ ಆಗಿದ್ದರು. ಆದರೂ ನನ್ನ ನಂಬರ್ ಅನ್ನು ತ್ರಿಬಲ್ ಎಕ್ಸ್ ಗ್ರೂಪ್‍ಗೆ ಸೇರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಗ್ರೂಪ್ ಅಡ್ಮಿನ್ ಇರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಒಂದು ತಂಡವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿ ಆರೋಪಿಯನ್ನು ಬಂಧಿಸಿ ಮುಂಬೈಗೆ ತಂದಿದ್ದಾರೆ.

ನಾನು ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ. ನನ್ನ ಮಾವನ ನಂಬರ್ ಎಂದು ಭಾವಿಸಿ ಮಹಿಳೆಯ ನಂಬರ್ ಅನ್ನು ಗ್ರೂಪ್‍ಗೆ ಸೇರಿಸಿದ್ದೇನೆ. ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ಗ್ರೂಪ್‍ನಲ್ಲಿ ಇರುವ ಎಲ್ಲ ಸದಸ್ಯರು ಪುರುಷರು ಅಂತಾ ಮುಸ್ತಾಕ್ ವಿಚಾರಣೆ ವೇಳೆ ಕ್ಷಮೆ ಯಾಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ವಿರುದ್ಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ, ಮುಸ್ತಾಕ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಬಳಿಕ ಆರೋಪಿ ಮುಸ್ತಾಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೆ ಇದೇ ತಪ್ಪು ಮರಳಿ ನಡೆದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಅಂತಾ 2000ರ ಐಟಿ ಕಾಯ್ದೆಯಲ್ಲಿ ತಿಳಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *