ವಾಟ್ಸಪ್‍ನಲ್ಲಿಯ ಫೇಕ್ ಮೆಸೇಜ್ ಪತ್ತೆ ಮಾಡೋದು ಹೇಗೆ?

Public TV
1 Min Read

ನವದೆಹಲಿ: ಭಾರತದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ, ಪಕ್ಷಗಳು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ಕೈಗೊಳ್ಳುತ್ತಿವೆ. ವಾಟ್ಸಪ್ ನಲ್ಲಿಯೂ ಕೆಲ ಅಭ್ಯರ್ಥಿ, ಪಕ್ಷಗಳ ಪರ-ವಿರೋಧದ ಮೆಸೇಜ್‍ಗಳು ಒಬ್ಬರಿಂದ ಒಬ್ಬರಿಗೆ ರವಾನೆ ಆಗುತ್ತಿರುತ್ತವೆ. ಹೀಗಾಗಿ ವಾಟ್ಸಪ್ ಬಳಕೆದಾರರು ಯಾವ ಮೆಸೇಜ್ ನಿಜ-ಸುಳ್ಳು ಎಂಬ ಗೊಂದಲಕ್ಕೊಳಗಾಗುವುದು ಸಹಜ. ಹೀಗಾಗಿ ವಾಟ್ಸಪ್ ಫೇಕ್ ಮೆಸೇಜ್ ಗಳನ್ನು ಪತ್ತೆ ಮಾಡಲು ಹೊಸ ಸೇವೆಯನ್ನು ಪರಿಚಯಿಸಿದೆ.

ನಿಮ್ಮ ವಾಟ್ಸಪ್ ಖಾತೆಗೆ ಬರುವ ಮೆಸೇಜ್, ಲಿಂಕ್ಸ್ ಗಳನ್ನು ‘Checkpoint Tipline’ ಫಾರ್‍ವರ್ಡ್ ಮಾಡುವ ಮೂಲಕ ನಿಮ್ಮ ಸಂದೇಶದ ಸತ್ಯಾಂಶವನ್ನು ತಿಳಿಯಬಹುದು. ‘Checkpoint Tipline’ ಸಿಸ್ಟಮ್ ನಿಂದ ಟೆಕ್ಸ್ಟ್ ಮಸೇಜ್, ವಿಡಿಯೋ ಮತ್ತು ಇಮೇಜ್ ಗಳ ಸತ್ಯಾಂಶವನ್ನು ಪರಿಶೀಲಿಸಲಿದೆ. ಈ ಸರ್ವಿಸ್ ಇಂಗ್ಲಿಷ್, ಹಿಂದಿ, ಬಂಗಾಲಿ, ಮಲಯಾಳಂ ಮತ್ತು ತೆಲಗು ಭಾಷೆಗಳಲ್ಲಿ ಲಭ್ಯವಿದ್ದು ಕನ್ನಡದಲ್ಲಿ ಲಭ್ಯವಿಲ್ಲ.

PROTO ಜೊತೆ ಪಾಲುದಾರಿಕೆ:
ಸಂದೇಶಗಳ ಸತ್ಯಾಂಶ ತಿಳಿಯಲು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟಸ್ (ICFJ) ಜೊತೆ ಅಸೋಸಿಯೇಟೆಡ್ ಮೀಡಿಯಾ ಸ್ಟಾರ್ಟ್ ಅಪ್ PROTO ಜೊತೆ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ. ಬಳಕೆದಾರ ಚೆಕ್‍ಪಾಯಿಂಟ್ ಸಹಾಯದಿಂದ ಕಳುಹಿಸುವ ಲಿಂಕ್ ಗಳನ್ನು PROTO ಪರಿಶೀಲನೆ ನಡೆಸುತ್ತದೆ.

ಹೇಗೆ ಕೆಲಸ ಮಾಡುತ್ತೆ?
ವಾಟ್ಸಪ್ ನಲ್ಲಿ ಕಳುಹಿಸುವ ಸಂದೇಶಗಳನ್ನು ಬಳಕೆದಾರ ಮಾತ್ರ ಓದಬಹುದು. ಅಂದ್ರೆ ಸೆಂಡರ್ ಮತ್ತು ರಿಸೀವರ್ ಇಬ್ಬರ ನಡುವಿನ ಸಂಭಾಷಣೆ ರಹಸ್ಯವಾಗಿರುತ್ತದೆ. ಹಾಗಾಗಿ ಮೂರನೇ ವ್ಯಕ್ತಿಯಾಗಿ PROTO ಸಂದೇಶ ಓದದೇ, ರಿಸೀವರ್ ಆದೇಶದಂತೆ ಕಾರ್ಯ ನಿರ್ವಹಿಸಲಿದೆ.

ಪರಿಶೀಲನೆ ಹೇಗೆ?
ಭಾರತದ ವಾಟ್ಸಪ್ ಬಳಕೆದಾರರು ಚೆಕ್‍ಪಾಯಿಂಟ್ ಟಿಪ್ ಲೈನ್ (+91-9643000888) ನಂಬರ್ ಗೆ ಮೆಸೇಜ್ ಕಳುಹಿಸಬೇಕು. ನೀವು ನೀಡಿರುವ ದತ್ತಾಂಶ, ಮೆಸೇಜ್, ಲಿಂಕ್, ವಿಡಿಯೋ ಮತ್ತು ಇಮೇಜ್ ಗಳನ್ನು ಪರಿಶೀಲಿಸಿ ಸುಳ್ಳು, ಭ್ರಮೆ (Misleading), ವಿವಾದಿತ ಸುದ್ದಿಗಳಂತೆ ವರ್ಗಿಕರಿಸಿ ಉತ್ತರಿಸುತ್ತದೆ.

Share This Article
Leave a Comment

Leave a Reply

Your email address will not be published. Required fields are marked *