ತುಮಕೂರು: ನಾನು ಕ್ರೀಡಾಪಟು. ನಾನು ತುಮಕೂರಿಗೆ (Tumakuru) ಕೀರ್ತಿ ತಂದಿದ್ದೇನೆ. ಹಾಗಾಗಿ ಕ್ರೀಡಾಪಟುಗಳು ಸೇರಿ ನನ್ನ ಹೆಸರು ಇಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ ಎಂದು ಗೃಹಸಚಿವ ಜಿ.ಪರಮೇಶ್ವರ್ (G Parameshwar) ಪ್ರಶ್ನಿಸಿದ್ದಾರೆ.
ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ (Mahatma Gandhi Stadium) ಪರಮೇಶ್ವರ್ ಹೆಸರು ವಿವಾದದ ನಡುವೆಯೂ ಇಂದು ಒಳಾಂಗಣ ಕ್ರೀಡಾಂಗಣಕ್ಕೆ ಡಾ.ಜಿ ಪರಮೇಶ್ವರ ಹೆಸರಿನ ನಾಮಫಲಕ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಡಾ. ಪರಮೇಶ್ವರ್ ಸಾಧನೆಯನ್ನು ಅನಾವರಣಗೊಳಿಸಲಾಯಿತು. ತುಮಕೂರು ಜಿಲ್ಲಾಡಳಿತ ಹಾಗೂ ಯುವಜನ ಸಬಲಿಕರಣ ಹಾಗೂ ಕ್ರಿಡಾ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕ್ರೀಡಾ ಅಸೋಸಿಯೇಷನ್‌ಗಳ ಸಭೆಯಲ್ಲಿ ತೀರ್ಮಾನಿಸಿ ಡಾ.ಜಿ ಪರಮೇಶ್ವರ್ ಹೆಸರು ನಾಮಕರಣ ಮಾಡಲಾಗಿದೆ. ಕರ್ನಾಟಕ ಒಲಂಪಿಕ್ ಅಧ್ಯಕ್ಷರಾದ ಗೋವಿಂದರಾಜು ನಾಮಫಲಕ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಆಯುಕ್ತರು ಯುವ ಸಬಲೀಕರಣ ಕ್ರಿಡಾ ಇಲಾಖೆ ಆಯುಕ್ತ ಚೇತನ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್ ಕೆ.ವಿ ಭಾಗಿಯಾಗಿದ್ದರು. ಇದನ್ನೂ ಓದಿ: ಮಹಾತ್ಮಾ ಗಾಂಧಿ ಕ್ರೀಡಾಂಗಣಕ್ಕೆ ಪರಮೇಶ್ವರ್ ಹೆಸರು – ಬಿಜೆಪಿ ಕೆಂಡ
ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ನಾವೆಲ್ಲಾ ಫುಟ್‌ಬಾಲ್ ಆಡುತ್ತಿದ್ದೆವು. ಜನವರಿ 16ರಿಂದ 22ರವರೆಗೆ ಕ್ರೀಡಾ ಕೂಟ ನಡೆಯುತ್ತದೆ. 16ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡುತ್ತಾರೆ. 22ರಂದು ರಾಜ್ಯಪಾಲರು ಸಮಾರೋಪ ಕಾರ್ಯಕ್ರಮಕ್ಕೆ ಬರುತ್ತಾರೆ. ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ 27 ವಿವಿಧ ಕ್ರೀಡೆಗಳು ನಡೆಯುತ್ತದೆ. ಜಿಲ್ಲಾಡಳಿತ ಎಲ್ಲದಕ್ಕೂ ವ್ಯವಸ್ಥೆ ಮಾಡಿಕೊಂಡಿದೆ. 40 ಎಕರೆ ಭೂಮಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ತಯಾರಾಗುತ್ತಿದೆ. ಇನ್ನು ಒಂದು ವರ್ಷದದಲಿ ಅದರ ಕಾಮಗಾರಿ ಪೂರ್ಣಗೊಳ್ಳಬಹುದು. ತುಮಕೂರಿಗೆ ಮೆಟ್ರೋ ರೈಲಿನ ಸಂಕಲ್ಪ ಮಾಡಿದ್ದೇನೆ. ಈ ಕ್ರೀಡಾ ಸಂಕೀರ್ಣಕ್ಕೆ ನನ್ನ ಹೆಸರು ಇಡಲು ಕ್ರೀಡಾ ಪಟುಗಳು ತೀರ್ಮಾನ ಮಾಡಿದ್ದಾರೆ, ನನಗೆ ಗೊತ್ತೇ ಇಲ್ಲ. ಕ್ರೀಡಾಪಟುಗಳು ಸೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲಾ ರೀ, ಒಂದು ಶೆಡ್‌ಗೆ ನನ್ನ ಹೆಸರು ಇಟ್ಟಿರೋದನ್ನು ನೀವು ಸಹಿಸಲ್ಲಾ, ಎಂಥಾ ಜನ ನೀವು? ನಾನು ಹೆಸರು ಇಡಲು ಕೇಳಿಕೊಳ್ಳಲ್ಲ. ಜನರು ಪ್ರೀತಿಯಿಂದ ಇಟ್ಟರೆ ಮಾತ್ರ ಅದು ಸಾಧ್ಯ ಎಂದರು. ಇದನ್ನೂ ಓದಿ: ಬೆಂಗಳೂರಿನ ಆಸ್ತಿ ಅಡಮಾನ ಇಟ್ಟಿದ್ದು ಬಿಜೆಪಿ ಸಾಧನೆ – ರಾಮಲಿಂಗಾರೆಡ್ಡಿ

