ಮಂಡ್ಯ: ಮದ್ದೂರಿನಲ್ಲಿ (Madduru) ನಡೆದ ಗಣೇಶ ವಿಸರ್ಜನೆ ಮೆರವಣಿಗೆ (Ganesh Procession) ವೇಳೆ ಕಲ್ಲು ತೂರಲು (Stone Pelting) ಮತಾಂಧ ಮನಸ್ಥಿತಿಯೇ ಕಾರಣ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಗಲಭೆ ಕಿಂಗ್‌ಪಿನ್ ಚನ್ನಪಟ್ಟಣ ಮೂಲದ ಇರ್ಫಾನ್ ಆಗಿದ್ದು ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದಾನೆ. ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಸಹಿಸಲಾಗದೇ ಇರ್ಫಾನ್‌ನನ್ನ ಸ್ನೇಹಿತ ಜಾಫರ್ ಕಲ್ಲು ತೂರುವಂತೆ ಪ್ರಚೋದಿಸಿದ್ದ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಈ ಕೃತ್ಯ ಎಸಗಲು ಮುಸ್ಲಿಂ ಯುವಕರ ಗುಂಪನ್ನು ಕಟ್ಟಿಕೊಂಡ ಇವರು ಗಣೇಶ ವಿಸರ್ಜನೆಯ ಮೆರವಣಿಗೆ ಮಸೀದಿ ದಾಟಿ 50 ಮೀಟರ್ ಮುಂದೆ ಹೋದ ಮೇಲೆ ಕಲ್ಲು ತೂರಿದ್ದಾರೆ. ಕಲ್ಲುಗಳು ಎಲ್ಲಿಂದ ಬಂದಿದೆ ಎನ್ನುವುದು ತಿಳಿಯಬಾರದು ಎಂಬ ಕಾರಣಕ್ಕೆ ಆರೋಪಿ ಸಲ್ಮಾನ್ ಬೀದಿ ದೀಪವನ್ನು ಆಫ್ ಮಾಡಿದ್ದ. ಎಸೆದ ಕಲ್ಲುಗಳು ಗಣೇಶ ಕೂರಿಸಿದ್ದ ಟ್ರಾಕ್ಟರ್‌ಗೆ ಮತ್ತು ಗಣೇಶನ ಮೂರ್ತಿಗೆ ಬಡಿಯುತ್ತಿದ್ದಂತೆ ಹಿಂದೂ ಯುವಕರು ಸಿಟ್ಟಾಗಿದ್ದಾರೆ. ಇದನ್ನೂ ಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ಪೊಲೀಸರು ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ
ಪ್ರತಿಯಾಗಿ ಮಸೀದಿ ಬಳಿಯಿಂದ ಮುಸ್ಲಿಮರು ನಮ್ಮ ಮೇಲೆ ಕಲ್ಲು ತೂರಿದ್ದಾರೆಂದು ಭಾವಿಸಿ ಪ್ರತಿದಾಳಿ ನಡೆಸಿದ್ದಾರೆ. ಕೆಲಕಾಲ ಎರಡು ಕೋಮುಗಳ ಯುವಕರ ನಡುವೆ ಸಂಘರ್ಷ ಉಂಟಾಗಿದೆ.
ಗಲಾಟೆ ಜೋರಾಗುತ್ತಿದ್ದಂತೆ ಇರ್ಫಾನ್ ಮತ್ತು ಗ್ಯಾಂಗ್ ಸದಸ್ಯರು ಪರಾರಿಯಾಗಿದ್ದರು. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಇರ್ಫಾನ್‌ಮತ್ತು 22 ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಕೃತ್ಯಕ್ಕೆ ಪ್ರಚೋದನೆ ನೀಡಿದ್ದ ಜಾಫರ್ ಈಗ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರ ಮೇಲಿನ ಕೇಸ್ ಹಿಂಪಡೆದಿದ್ದಕ್ಕೆ ಬಾಲ ಬಿಚ್ಚಿದ್ದಾರೆ: ಪ್ರತಾಪ್ ಸಿಂಹ
ಕಲ್ಲು ತೂರಾಟ ಹಿಂದೆ ಸಂಘಟನೆಗಳ ಕೈವಾಡ ಇದ್ಯಾ? ಆರೋಪಿಗಳು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರಾ? ಬಂಧಿತರಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ ಎಂಬುದರ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ರಾಮ್ ರಹೀಮ್ ನಗರದ ಮಸೀದಿ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಸಾಕ್ಷ್ಯಗಳು ಸಿಕ್ಕಿದರೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.