ಯುಪಿಎ ಎಂದರೇನು?.. ಯುಪಿಎ ಎನ್ನುವುದು ಇತಿಹಾಸ: ಮಮತಾ ಬ್ಯಾನರ್ಜಿ

Public TV
1 Min Read

ಮುಂಬೈ: ಇತ್ತೀಚಿಗೆ ಕಾಂಗ್ರೆಸ್‍ನಿಂದ ಅಂತರ ಕಾಯ್ದುಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ತಾನೇ ಪರ್ಯಾಯ ಎಂದು ಬಿಂಬಿಸಿಕೊಳ್ಳಲು ಹೊರಟಂತೆ ಕಾಣುತ್ತಿದೆ. ಇದಕ್ಕೆ ಪೂರಕವೆಂಬಂತೆ ಯುಪಿಎ ಎಂದರೇನು? ಯುಪಿಎ ಎನ್ನುವುದು ಇತಿಹಾಸ ಎಂದು ಬ್ಯಾನರ್ಜಿ ಹೇಳಿಕೆ ಕೊಟ್ಟು ಕುತೂಹಲ ಮೂಡಿಸಿದ್ದಾರೆ.

ಮುಂಬೈನಲ್ಲಿ ಎನ್‍ಸಿಪಿ ನೇತಾರ ಶರದ್ ಪವಾರ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಬಿಜೆಪಿ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‍ಗೆ ಮನಸ್ಸೇ ಇಲ್ಲದಂತಾಗಿದೆ. ಯುಪಿಎ ಎಂದರೇನು? ಯುಪಿಎ ಅನ್ನೋದು ಇಲ್ವಲ್ಲ ಎನ್ನುವ ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್‍ಗೆ ಸಾಧ್ಯವಿಲ್ಲ. ನಾನು ಹೋರಾಟ ಮಾಡುತ್ತೇನೆ ಎಂಬ ಸುಳಿವನ್ನು ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ 10 ಅಪ್ಲಿಕೇಶನ್‍ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ

ಬಿಜೆಪಿ ವಿರುದ್ಧ ಗೆಲ್ಲಬೇಕಾದರೆ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು. ಆದರೆ ಇದೀಗ ಯುಪಿಎ ಮೈತ್ರಿಕೂಟ ಅಸ್ತಿತ್ವದಲ್ಲಿಯೇ ಇಲ್ಲ. ಬಿಜೆಪಿ ವಿರುದ್ಧ ಹೋರಾಡಲು ಬಲಿಷ್ಠವಾದ ಪರ್ಯಾಯ ತಂಡವೊಂದನ್ನು ಕಟ್ಟಬೇಕಿದೆ. ಹಾಗಾಗಿ ಶರದ್ ಪವಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಪವಾರ್ ಹೇಳಿದ್ದಕ್ಕೆ ನನ್ನ ಸಹಮತವಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಸರ್ಕಾರಿ ನೌಕರರು, ವಕೀಲರಿಗೆ 1 ರೂ.ಗೆ ಸಿಗಲಿದೆ ಮನೆ

ಈ ನಡುವೆ ಮಮತಾ ಬ್ಯಾನರ್ಜಿ ಶಿವಸೇನೆಯ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಭೇಟಿಯಾಗಿ ಚರ್ಚಿಸಿದ್ದರು. ಈ ನಡೆ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾನರ್ಜಿ ರಾಜಕೀಯದಲ್ಲಿ ಹೊಸ ಚದುರಂಗದಾಟ ಶುರುಮಾಡಿದಂತಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಭಾರತದ ಅಂತರರಾಷ್ಟ್ರೀಯ ವಿಮಾನ ಪುನರಾರಂಭ ಮುಂದೂಡಿಕೆ

ಇತ್ತ ಮಮತಾ ಬ್ಯಾನರ್ಜಿ ಈರೀತಿಯ ಹೇಳಿಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಭಾರತೀಯ ರಾಜಕಾರಣದ ವಾಸ್ತವತೆ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಬಿಟ್ಟು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *