ಪ್ರಜ್ವಲ್ ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ, ಜನಸೇವೆಗೆ ಬಂದಿದ್ದಾರೆ: ಅಪರಾಧಿ ಪರ ವಕೀಲರ ವಾದ ಏನು?

Public TV
1 Min Read

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಬದಲಾಗಿ ಜನಸೇವೆಗಾಗಿ ಬಂದಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲೆ ಮಂಜುಳಾ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪದಲ್ಲಿ ಅಪರಾಧಿಯಾಗಿದ್ದ ಪ್ರಜ್ವಲ್ ರೇವಣ್ಣ ಪರ ವಾದ ಮಾಡಿ, ಚುನಾವಣೆ ಹೊತ್ತಲ್ಲೇ ವಿಡಿಯೋ ಹೊರಗೆ ಬಂದಿದೆ. ಇದನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ. ರಾಜಕೀಯ ಹಿನ್ನೆಲೆಯನ್ನು ಶಿಕ್ಷೆ ವಿಧಿಸಲು ಪರಿಗಣಿಸಬಾರದು. ಪ್ರಜ್ವಲ್ ರೇವಣ್ಣ ಸಂಸದರಾಗಿ ಮಾಡಿರುವ ಕೆಲಸಕ್ಕೆ ಚ್ಯುತಿಯಾಗಬಾರದು ಎಂದು ವಾದಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್

ಸಂತ್ರಸ್ತೆಯೂ ಸಮಾಜದಿಂದ ತಿರಸ್ಕೃತವಾಗಿಲ್ಲ. ಆಕೆ ಕುಟುಂಬದ ಜೊತೆ ಜೀವನ ಮುಂದುವರಿಸಿದ್ದಾರೆ. ಇಲ್ಲಿ ಪ್ರಜ್ವಲ್‌ಗೆ ನಷ್ಟವಾಗಿದೆ. ಹಾಗೆಯೇ ಅವರ ತೇಜೋವಧೆಯಾಗಿದೆ. ಪ್ರಜ್ವಲ್ 1 ವರ್ಷ 4 ತಿಂಗಳಿಂದ ಜೈಲಿನಲ್ಲಿದ್ದಾರೆ. ಇನ್ನೂ ಯುವಕನಾಗಿರುವ ಕಾರಣ ಅವರಿಗೆ ಮುಳುವಾಗುವಂಥ ಶಿಕ್ಷೆ ನೀಡಬಾರದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

ಪ್ರಜ್ವಲ್ ರಾಜಕೀಯ ಜೀವನ ಹಾಳು ಮಾಡಲು ಈ ಕುತಂತ್ರ ನಡೆದಿದೆ. ಆಡಳಿತ ಪಕ್ಷವೂ ಕೂಡ ವೈಯಕ್ತಿಕವಾಗಿ ಪರಿಗಣಿಸಿತ್ತು. ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ನೀಡದೇ ಕನಿಷ್ಠ ಶಿಕ್ಷೆ ನೀಡಬೇಕು ಎಂದು ವಾದಿಸಿದರು.

ಈ ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ಸೆಷನ್ಸ್ ಕೋರ್ಟ್ನ ನ್ಯಾ. ಗಜಾನನ ಭಟ್ ಅವರು, ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ, ಅತ್ಯಾಚಾರ ಸಂತ್ರಸ್ತೆಗೆ 11 ಲಕ್ಷ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

Share This Article