ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

Public TV
1 Min Read

ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಥಿಯೇಟರ್ ಗೆ ಬಂದು, ಅದರ ಫಲಿತಾಂಶ ಇಷ್ಟೊತ್ತಿಗೆ ಹೊರ ಬಿದ್ದಿರುತ್ತಿತ್ತು. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕ ಘೋಷಣೆ ಮುಂದೂಡುತ್ತಲೇ ಸಾಗಿತು. ಶುರುವಿನಿಂದ ಈವರೆಗೂ ಒಂದಿಲ್ಲೊಂದು ಬದಲಾವಣೆ ಕಾಣುತ್ತಲೇ ಬಂದಿರುವ ಈ ಸಿನಿಮಾ, ಬಿಡುಗಡೆ ವಿಷಯದಲ್ಲೂ ಅದನ್ನೇ ಪಾಲಿಸಿಕೊಂಡು ಬಂತು. ಇದೀಗ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಎನ್ನುವ ಮಾಹಿತಿ ಚಿತ್ರತಂಡದಿಂದ ಬಂದಿದೆ. ಚಾರ್ಲಿ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವುದನ್ನು ಸದ್ಯದಲ್ಲೇ ತಿಳಿಸುತ್ತಾರಂತೆ ನಿರ್ದೇಶಕ ಕಿರಣ್ ರಾಜ್. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

ಮಾ.17ಕ್ಕೆ ಪುನೀತ್ ಅವರ ಹುಟ್ಟು ಹಬ್ಬ. ಅಂದೇ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಳಿದ್ದಾರೆ ನಿರ್ದೇಶಕರು. ಕನ್ನಡವಷ್ಟೇ ಅಲ್ಲದೇ ಹಿಂದಿಯಲ್ಲೂ ಈ ಸಿನಿಮಾ ರೆಡಿಯಾಗಿದ್ದು, ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಆಗುವ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ಸಂಬಂಧವನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಹಾಗಾಗಿ ಮಕ್ಕಳಿಂದ ದೊಡ್ಡವರ ತನಕ ಈ ಸಿನಿಮಾವನ್ನು ವೀಕ್ಷಿಸಬಹುದಂತೆ.  ದಿನಾಂಕ ಘೋಷಣೆ ಆದ ತಕ್ಷಣವೇ, ಪೋಸ್ಟರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.

Share This Article
Leave a Comment

Leave a Reply

Your email address will not be published. Required fields are marked *