100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

Public TV
1 Min Read

– ಬೋಯಿಂಗ್ ಮಾರುಕಟ್ಟೆಗೆ ಬಹುದೊಡ್ಡ ಆರ್ಥಿಕ ಹೊಡೆತ ಸಾಧ್ಯತೆ!

ಅಹಮದಾಬಾದ್: ಬೋಯಿಂಗ್‌ನ 787-ಡ್ರೀಮ್ ಲೈನರ್ (Dreamliner 787) ಮಾಡೆಲ್ ಅತ್ಯಂತ ವಿಶ್ವಾಸಾರ್ಹದ ಜೊತೆಗೆ ಇಂಧನ ದಕ್ಷತೆ, ಸುರಕ್ಷತೆ, ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. 14 ವರ್ಷಗಳಲ್ಲಿ ಸುಮಾರು 1 ಸಾವಿರ ಡ್ರೀಮ್ ಲೈನರ್ ವಿಮಾನಗಳನ್ನ ಮಾರಾಟ ಮಾಡುವ ಮೂಲಕ ಬೋಯಿಂಗ್ ದಾಖಲೆ ಬರೆದಿದೆ.

ಸಾರ್ವಕಾಲಿಕ ಅತ್ಯುತ್ತಮ ಮಾರಾಟ ಕಂಡ ವೈಡ್-ಬಾಡಿ ಪ್ಯಾಸೆಂಜರ್ ವಿಮಾನ ಡ್ರೀಮ್ ಲೈನರ್ 100 ಕೋಟಿಗೂ ಹೆಚ್ಚು ಪ್ರಯಾಣಿಕರನ್ನ ಸಾಗಿಸಿದ ವಿಮಾನ ಎಂಬ ಬ್ರ‍್ಯಾಂಡ್ ಅನ್ನು ಅಲ್ಪಾವಧಿಯಲ್ಲಿಯೇ ಪಡೆದಿತ್ತು. ಇದನ್ನೂ ಓದಿ: ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

ಈ ಹಿಂದೆ ಸುರಕ್ಷತೆಯ ಕುರಿತು ಬೋಯಿಂಗ್ (Boeing) ಕಂಪನಿಗೆ ಹಲವು ಸವಾಲುಗಳು ಎದುರಾಗಿದ್ದವು. ಹಲವು ಆರೋಪಗಳನ್ನ ಎದುರಿಸಿದ್ದ ಬೋಯಿಂಗ್‌ನ ಡ್ರೀಮ್ ಲೈನರ್ ಹಾರಾಟವನ್ನ 3 ತಿಂಗಳ ಕಾಲ ವಿಶ್ವದಾದ್ಯಂತ ನಿಷೇಧಿಸಲಾಗಿತ್ತು. ಆರೋಪ, ಸವಾಲುಗಳನ್ನ ಎದುರಿಸಿ ಮತ್ತೆ ವಿಶ್ವಾಸಾರ್ಹತೆ ಗಳಿಸಿದ್ದ ಬೋಯಿಂಗ್ ಪುನಃ ಆಕಾಶಕ್ಕೆ ಚಿಮ್ಮಿತ್ತು. ಆದ್ರೆ ಈಗ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: Plane Crash – ನಗುಮೊಗದ ಗಗನಸಖಿ ಮನೀಷಾ ಥಾಪಾ ದುರಂತ ಅಂತ್ಯ

ಡ್ರೀಮ್ ಲೈನರ್ ವಿಮಾನದ ಆಯಸ್ಸು 30 ರಿಂದ 50 ವರ್ಷ ಎನ್ನಲಾಗಿದೆ. 210-250 ಸೀಟ್‌ಗಳೊಂದಿಗೆ 9,800 ಮೈಲುಗಳು ಪ್ರಯಾಣಿಸಬಲ್ಲವು. ಆದ್ರೆ ಅಹಮದಾಬಾದ್‌ನಲ್ಲಿ ಉರುಳಿದ ವಿಮಾನ ಆಯಸ್ಸು ಕೇವಲ 11 ವರ್ಷ. ಈ ಹಿಂದೆ ಸುರಕ್ಷತೆ ವಿಚಾರದಲ್ಲಿ ಎದ್ದ ಆರೋಪ, ಸವಾಲುಗಳನ್ನ ಮೆಟ್ಟಿ ನಿಂತು ವ್ಯಾಪಾರವನ್ನ ವಿಸ್ತರಿಸಿಕೊಳ್ತಿದ್ದ ವೇಳೆಯೇ ಬೋಯಿಂಗ್ ಕಂಪನಿಗೆ ಈ ದುರಂತ ದೊಡ್ಡ ಆರ್ಥಿಕ ಹೊಡೆತ ಕೊಡುವ ಭೀತಿ ಶುರುವಾಗಿದೆ. ಅದೇನೇ ಇರಲಿ ಅತಿ ಸುರಕ್ಷತೆಯ ವಿಮಾನ ಎಂದು ಹೇಳಿಕೊಂಡಿದ್ದ ವಿಮಾನ ಪತನಕ್ಕೆ (Plane Crash) ಸಾಕ್ಷಿಯಾಗಿರೋದು ನಿಜಕ್ಕೂ ದುರಂತವೇ ಸರಿ.

Share This Article