ಚಿಕ್ಕಬಳ್ಳಾಪುರ: ಸೋನಿಯಾ ಗಾಂಧಿ (Sonia Gandhi) ಅವರಿಗೆ ಧರ್ಮಸ್ಥಳದ (Dharmasthala) ಬಗ್ಗೆ ಏನು ಗೊತ್ತಿದೆ? ಅವರ ತಲೆಯಲ್ಲಿ ತಮ್ಮ ಮಗನನ್ನು ಪ್ರಧಾನಿ ಮಾಡಬೇಕು ಎನ್ನುವುದಷ್ಟೇ ಇದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ತಿಳಿಸಿದರು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದ್ದು, ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದಿರುವ ವಿಚಾರವಾಗಿ ವಿ.ಸೋಮಣ್ಣ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಇದನ್ನು ಆ ಹೆಣ್ಣು ಮಕ್ಕಳಿಗೆ ಯಾರೋ ಹೇಳಿಕೊಟ್ಟು ಮಾಡಿಸಿರಬಹುದು. ಸಿದ್ದರಾಮಯ್ಯ ಮತ್ತು ಅವರ ತಂಡದ ಹೊಸ ಕಥೆಯಂತಿದೆ ಎಂದರು.ಇದನ್ನೂ ಓದಿ: ಕೊಂದವರು ಯಾರು? – ಧರ್ಮಸ್ಥಳ ಪ್ರಕರಣದ ಬಗ್ಗೆ ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ
ಡಿ.ಕೆ.ಶಿವಕುಮಾರ್ ಬುದ್ಧಿವಂತಿಕೆಗೆ ಬೇಸರ ಮಾಡಿಕೊಂಡಿರುವವರು ಹೀಗೆ ಮಾಡಿಸಿರಬಹುದು. ಇಂತಹದ್ದೆಲ್ಲವನ್ನೂ ಮಾಡುವುದೇ ಕಾಂಗ್ರೆಸ್‌ನವರ ಕುತಂತ್ರ. ಸೋನಿಯಾ ಗಾಂಧಿ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಒಳ್ಳೆಯವರು. ನನ್ನ ಮಗ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎನ್ನುವ ತವಕದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.