10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಕೊಂಡು ಏನು ಮಾಡ್ತೀರಿ? : ಹೆಚ್‌ಡಿಕೆ ಕಿಡಿ

Public TV
3 Min Read

– ಪ್ರತಿದಿನ ಕುರಿಕಾಯೋನು, ಅದಕ್ಕೆ ಹೊಟ್ಟೆ ಉರಿ ಅಂತಾರೆ. ಮೋದಿ ಟೀ ಮಾರಿಲ್ವಾ? ಎಂದ ಸಚಿವ

ಮೈಸೂರು: ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಟುಕೊಂಡು ಈಗ ಏನು ಮಾಡ್ತೀರಿ? ಇದು ಸಿದ್ದರಾಮಯ್ಯ (CM Siddaramaiah) ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಅಂತ ಕಾಂಗ್ರೆಸ್‌ನವರೇ ಹೇಳ್ತಿದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಕಿಡಿಕಾರಿದ್ದಾರೆ.

ಆಯುಧಪೂಜೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವಿ ದರ್ಶನ ಪಡೆದು ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಜಾತಿಗಣತಿ ಆಗಲಿಲ್ಲ ಎಂದು ಆರೋಪ ಮಾಡಿದ್ರು. ನಾನು 14 ತಿಂಗಳು ಸಿಎಂ ಆಗಿದ್ದೆ, ಅವರು ಬಂದು 15 ತಿಂಗಳಾಗಿದೆ. ಯಾಕೆ ಬಿಡುಗಡೆ ಮಾಡಿಲ್ಲ? ಪ್ರತಿನಿತ್ಯ ಕುರಿಕಾಯೋನು, ಅದಕ್ಕೆ ಹೊಟ್ಟೆ ಉರಿ ಅಂತ ಹೇಳಿಕೊಂಡು ತಿರುಗುತ್ತಾರೆ. ಮೋದಿ ಟೀ ಮಾರಿಲ್ವಾ? ನಾವು ಅಸೂಯೆ ಪಟ್ರೆ ಆಗುತ್ತಾ? ಜನ ತೀರ್ಮಾನ ಮಾಡ್ಬೇಕು? ಹತ್ತು ವರ್ಷ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಈಗ ಇಟ್ಕೊಂಡು ಏನು ಮಾಡ್ತೀರಿ? ಇದು ಸಿದ್ದರಾಮಯ್ಯ ಆಫೀಸಲ್ಲಿ ಕುಳಿತು ಮಾಡಿದ ರಿಪೋರ್ಟ್ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

ಹೆಚ್‌ಡಿಕೆ ಕೇವಲ ಆರೋಪ ಮಾಡದೇ ದಾಖಲೆ ನೀಡಲಿ ಎಂಬ ವಿಚಾರವಾಗಿ ಮಾತನಾಡಿ, ನಾನು ಎಷ್ಟು ದಾಖಲೆ ಕೊಡಲಿ. ಈಗ ಕೊಟ್ಟಿರುವುದೇ ಅರಗಿಸಿಕೊಳ್ಳೋಕಾಗ್ತಿಲ್ಲ. ಕಾಂಗ್ರೆಸ್ ಮುಖಂಡರೇ ಇದರ ಬಗ್ಗೆ ಮಾತಾಡುತ್ತಾರೆ. ಪೆನ್‌ಡ್ರೈವ್‌ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಇದ್ದಿದ್ದು. ಅದರಲ್ಲಿ ಅಶ್ಲೀಲ ಚಿತ್ರ ಇರಲಿಲ್ಲ. ನಾನು ಕಮಿಷನ್ ಹೊಡಿಬೇಕು ಅಂತಿದ್ರೆ ರೈತರ ಸಾಲ ಮನ್ನಾ ಮಾಡಬೇಕಾಗಿರಲಿಲ್ಲ. ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಯಾರಿಗೂ ಒತ್ತಡ ಹಾಕಿ ಕಮಿಷನ್ ಪಡೆದಿಲ್ಲ. ತಾಯಿ ಸನ್ನಿಧಾನದಲ್ಲಿ ಹೇಳ್ತಿದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ದುಬೈನಲ್ಲಿ ಅರೆಸ್ಟ್‌

ಕೋವಿಡ್ ಹಗರಣದ ತನಿಖೆಗೆ ಎಸ್‌ಐಟಿ (SIT) ರಚನೆ ವಿಚಾರವಾಗಿ ಮಾತನಾಡಿ, ನಿನ್ನೆ ಕ್ಯಾಬಿನೆಟ್‌ನಲ್ಲಿ ಎಸ್‌ಐಟಿ ತನಿಖೆ ಮಾಡುತ್ತೇನೆ ಅಂದಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ಇವರು ವಿರೋಧಪಕ್ಷದಲ್ಲಿದ್ದಾಗ ಕೋವಿಡ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಇದೇ ಸಿದ್ದರಾಮಯ್ಯ ಸದನದಲ್ಲಿ ಚರ್ಚೆ ಮಾಡಿದ್ರು. ಸರ್ಕಾರ ರಚನೆ ಆಗಿ 15 ತಿಂಗಳಾಗಿದೆ. ಇಷ್ಟುದಿನ ಸುಮ್ಮನಿದ್ದರು. ಈಗ ತನಿಖೆ ಮಾಡ್ತಾರಾ? ಅವರ ವೈಫಲ್ಯ ಮುಚ್ಚಿಕೊಳ್ಳಲು ಇವೆಲ್ಲ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಹಾವೇರಿಯಲ್ಲಿ ಮಳೆಗೆ 4 ಎಕರೆ ಶೇಂಗಾ ಬೆಳೆ ನಾಶ – ಲಕ್ಷಾಂತರ ರೂ. ನಷ್ಟ

ಕಾಂಗ್ರೆಸ್‌ನವರು (Congress) ಇಂದು ಪೇಪರ್‌ನಲ್ಲಿ ಅದ್ಯಾವುದೋ ಜಾಹಿರಾತು ಕೊಟ್ಟಿದ್ದಾರೆ. ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ. ಕರ್ನಾಟಕ ರಾಜ್ಯವನ್ನ ವಾಮಾಮಾರ್ಗ, ಮೋಸದಿಂದ ಅಸ್ತಿರಗೊಳಿಸುತ್ತಿದ್ದಾರೆ ಅಂತ ಕೊಟ್ಟಿದ್ದಾರೆ. ಆದರೆ ವಾಮಾಮಾರ್ಗ, ಮೋಸವನ್ನ ಸ್ಥಿರಗೊಳಿಸಲು ಹೊರಟಿರೋ ಸರ್ಕಾರ ಇದು. ಇವರು ಯಾವತ್ತು ಸತ್ಯ ಧರ್ಮದಲ್ಲಿ ಉಳಿದಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನ ಕೇಳುತ್ತೇನೆ. ಬಡವರಿಗೆ ಕೊಡುವ ಹಣವನ್ನ ವಾಲ್ಮೀಕಿ ನಿಗಮದಲ್ಲಿ ನುಂಗಿದ್ದಾರೆ. ಮೋಸಮಾಡಿ ಸೈಟ್ ತೆಗೆದುಕೊಂಡಿದ್ರು. ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ವಾಪಸ್ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆ ಆಗಿದೆ. ಅದರ ಸತ್ಯಾಂಶಗಳು ಹೊರಬರುವ ಕಾಲ ದೂರ ಇಲ್ಲ ಎಂದರು. ಇದನ್ನೂ ಓದಿ: MUDA Scam | ಮೊದಲ ಹಂತದ ತನಿಖೆ ಮುಕ್ತಾಯ – 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆ ಸೀಜ್‌

ಸಿದ್ರಾಮಣ್ಣನ ಯಾವ ವಾಮಾಮಾರ್ಗದಲ್ಲಿ ಸೈಟ್ ಪಡೆದಿದ್ದಾರೆ ಎಂದು ಇನಕಲ್ ಸಾಕಮ್ಮನ ಕೇಳಿದರೆ ಗೊತ್ತಾಗುತ್ತದೆ. ಇದೆಲ್ಲ ಇತಿಹಾಸ ಇದೆ. ಹಾಗಾಗಿ ಇಲ್ಲಿ ಸ್ಥಿರಗೊಳಿಸೋದು ಅಸ್ಥಿರ ಗೊಳಿಸೊದು ನಮ್ಮ ಕೈಯಲ್ಲಿಲ್ಲ. ಎಲ್ಲ ಚಾಮುಂಡಿ ಅಮ್ಮನ ಕೈಯಲ್ಲಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಹುಬ್ಬಳ್ಳಿ ಗಲಭೆ ಕೇಸ್‌ ವಾಪಸ್‌ – ಮುಸ್ಲಿಮರ ಓಲೈಕೆ ರಾಜಕೀಯ ಎಂದು ಬಿಜೆಪಿ ಕಿಡಿ

Share This Article