ಮಕ್ಕಳು ಮಾಡ್ಕೋತೀರಾ? : ನರೇಶ್-ಪವಿತ್ರಾ ಲೋಕೇಶ್ ಖಡಕ್ ಉತ್ತರ

Public TV
1 Min Read

ನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿರುವ ಮತ್ತು ಸತಿ ಪತಿಗಳಂತೆಯೇ ಬದುಕುತ್ತಿರುವ ವಿಷಯವನ್ನು ಮೊನ್ನೆಯಷ್ಟೇ ಬಹಿರಂಗ ಪಡಿಸಿದ್ದಾರೆ. ಹಾಗಾಗಿ ತೆಲುಗಿನ ಮಾಧ್ಯಮವೊಂದು ಈ ಇಬ್ಬರಿಗೂ ಮಕ್ಕಳು (Children) ಹೊಂದುವ ಕುರಿತು ಪ್ರಶ್ನೆ ಮಾಡಿದೆ. ಮೊದ ಮೊದಲ ಈ ಪ್ರಶ್ನೆಗೆ ಉತ್ತರಿಸಲು ಮೀನಾಮೇಷ ಎಣಿಸುವ ಈ ಜೋಡಿ ಆ ನಂತರ ಖಡಕ್ ಆಗಿ ಉತ್ತರ ನೀಡಿದೆ.

ಈಗಾಗಲೇ ಪವಿತ್ರಾ ಲೋಕೇಶ್ ಅವರಿಗೆ ಎರಡು ಮಕ್ಕಳಿವೆ. ನರೇಶ್ ಅವರಿಗೆ ಒಂದು ಮಗು ಇದೆ ಎಂದು ಹೇಳಲಾಗುತ್ತಿದೆ. ಆದರೂ, ನರೇಶ್ ಮತ್ತು ಪವಿತ್ರಾ ಜೋಡಿ ಮಗು ಹೊಂದಲು ಆಲೋಚನೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿದ್ದು ಸಹಜ. ಈ ಪ್ರಶ್ನೆಗೆ ಉತ್ತರಿಸಿರುವ ನರೇಶ್, ‘ದೈಹಿಕವಾಗಿ ಮಗು ಮಾಡಿಕೊಳ್ಳುವಂತಹ ಸಾಮರ್ಥ್ಯ ಇಬ್ಬರಿಗೂ ಇದೆ. ಆದರೆ, ಮಗು ಹೊಂದುವುದೇ ಜೀವನವಲ್ಲ. ನಮಗಾಗಿ ಈಗಾಗಲೇ ಮಕ್ಕಳು ಕಾದಿವೆ’ ಎಂದು ಭಾವನಾತ್ಮಕವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

ಮಗುವಿನ ವಿಚಾರವನ್ನು ಮಾತನಾಡಲು ಮೊದ ಮೊದಲು ಪವಿತ್ರಾ ಲೋಕೇಶ್ ನಿರಾಕರಿಸಿದರೂ ನಂತರ, ‘ಈಗಾಗಲೇ ಸಮಾಜದಲ್ಲಿ ತಂದೆ ತಾಯಿ ಇಲ್ಲದ ಸಾಕಷ್ಟು ಮಕ್ಕಳಿವೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವ ಮೂಲಕ ಸಮಾಜಕ್ಕೆ ಸಂದೇಶ ನೀಡುವುದರಲ್ಲಿ ಏನಿದೆ? ನಾವು ಜೋಡಿಯಾಗಿ ಮಾಡುವ ಕೆಲಸ ಸಾಕಷ್ಟಿವೆ. ಅವುಗಳನ್ನು ಮಾಡುತ್ತೇವೆ’ ಎಂದಿದ್ದಾರೆ.

ರಿಲೇಷನ್ ಶಿಪ್, ಮದುವೆ (Marriage), ಜೀವನ ಎಲ್ಲದರ ಬಗ್ಗೆಯೂ ಮಾಧ್ಯಮಗಳ ಮುಂದೆ ಇಬ್ಬರೂ ಮಾತನಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ಮಕ್ಕಳನ್ನು ಮಾಡಿಕೊಳ್ಳುವಂತಹ ಯೋಚನೆ ಇಲ್ಲವೆಂದೂ ಹೇಳಿಕೊಂಡಿದ್ದಾರೆ. ಈಗೇನಾದರೂ ಮಕ್ಕಳನ್ನು ಹೊಂದಿದರೆ, ಅವರು 20 ವರ್ಷಕ್ಕೆ ಕಾಲಿಡುವಾಗ ನಾವು 60 ದಾಟಿರುತ್ತೇವೆ ಎಂದೂ ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.

Share This Article