ಕ್ರಿಕೆಟಿಗ ರಿಂಕು ಸಿಂಗ್ ಬಗ್ಗೆ ಅಮೆರಿಕಾದ ನೀಲಿ ಚಿತ್ರತಾರೆ ಹೇಳಿದ್ದೇನು?

Public TV
1 Min Read

ಕ್ರಿಕೆಟ್ (Cricket) ಆಟಗಾರರ ಮೇಲೆ ಸಿನಿಮಾ ನಟಿಯರು ಒಲವು ವ್ಯಕ್ತಪಡಿಸುವುದು ಹೊಸದೇನೂ ಅಲ್ಲ. ಡೇಟಿಂಗ್, ಲವ್, ಫ್ರೆಂಡ್ ಶಿಪ್ ಹೀಗೆ ಆಟಗಾರರಿಗೂ ಮತ್ತು ಸಿನಿಮಾ ತಾರೆಯರಿಗೆ ಹಲವು ವರ್ಷಗಳಿಂದ ನಂಟಿದೆ. ಅನೇಕ ನಟಿಯರು ಕ್ರಿಕೆಟ್ ಆಟಗಾರರನ್ನು ಮದುವೆ ಕೂಡ ಆಗಿದ್ದಾರೆ. ಇದೇ ಕಾರಣಕ್ಕಾಗಿಯೇ ಈಗ ರಿಂಕು ಸಿಂಗ್ (Rinku Singh) ಸುದ್ದಿಗೆ ಸಿಕ್ಕಿದ್ದಾರೆ.

ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಕ್ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ ಮನ್ ರಿಂಕು ಸಿಂಗ್ ಗುಜರಾತ್ ಟೈಟಾನ್ಸ್ ವಿರುದ್ಧದ ಆಟದಲ್ಲಿ ರೋಚಕವಾಗಿ ಬ್ಯಾಟ್ ಮಾಡಿದರು. ಅದರಲ್ಲಿ ಕೊನೆಯ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗಿಸಿದ್ದರು. ಈ ಆಟವೇ ರಿಂಕು ಬಗ್ಗೆ ಪ್ರೀತಿ ಮೂಡುವಂತೆ ಮಾಡಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ರಿಂಕು ಸಿಂಗ್ ಬ್ಯಾಟಿಂಗ್ ಆರ್ಭಟವನ್ನು ಕಣ್ತುಂಬಿಕೊಂಡಿರುವ ಅಮೆರಿಕಾದ (America) ನೀಲಿ ಚಿತ್ರಗಳ ಖ್ಯಾತ ತಾರೆ ಕೇಂದ್ರ ಲಸ್ಟ್ (Kendra Lust) ಕ್ರಿಕೆಟಿಗನ ಕುರಿತು ಹಾಡಿಹೊಗಳಿದ್ದಾರೆ. ರಿಂಕು ಮೇಲೆ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ರಿಂಕು ದಿ ಕಿಂಗ್’ ಎಂದು ಬರೆಯುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಲಸ್ಟ್ ಟ್ವೀಟ್ ಮಾಡುತ್ತಿದ್ದಂತೆಯೇ ರಿಂಕು ಅಭಿಮಾನಿಗಳು ಪ್ರತಿಯಾಗಿ ಧನ್ಯವಾದ ತಿಳಿಸಿದ್ದಾರೆ. ಆಟದಲ್ಲೇ ಹೆಚ್ಚು ಗಮನ ಕೊಡು ಎಂದು ರಿಂಕುವನ್ನು ಎಚ್ಚರಿಸಿದ್ದಾರೆ. ರಿಂಕುಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಶುಭ ನುಡಿದಿದ್ದಾರೆ. ಕೇಂದ್ರ ಲಸ್ಟ್ ಟ್ವೀಟ್ ಕುರಿತಾಗಿಯೂ ಚರ್ಚೆ ಮಾಡಿದ್ದಾರೆ.

Share This Article