ಪ್ರಶಾಂತ್ ನೀಲ್ ಜೊತೆಗಿನ ಉಗ್ರಂ ವೀರಂ ಸಿನಿಮಾ ಬಗ್ಗೆ ಶ್ರೀಮುರಳಿ ಹೇಳಿದ್ದೇನು?

1 Min Read

ಸ್ಯಾಂಡಲ್‌ವುಡ್‌ನ ನಟ ಶ್ರೀಮುರಳಿಗೆ ಇಂದು (ಡಿ.17) ಹುಟ್ಟುಹಬ್ಬ. 42ನೇ ಹುಟ್ಟುಹಬ್ಬವನ್ನ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಜೊತೆಗೆ ಒಂದು ಅಹಿತಕರ ಘಟನೆಯಿಂದ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಆಗಲಿಲ್ಲ, ದಯವಿಟ್ಟು ಅಭಿಮಾನಿಗಳು ಬೇಸರ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಸದ್ಯ ಪರಾಕ್ ಹಾಗೂ ಯುಗ್ರಾಯುಧಮ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ನಟ ಶ್ರೀಮುರಳಿ, ಎರಡು ಸಿನಿಮಾ ಪ್ಯಾರಲಲ್ಲಾಗಿ ಶೂಟಿಂಗ್ ಮಾಡ್ತಿದ್ದೀವಿ ಎಂದಿದ್ದಾರೆ. 2026ಕ್ಕೆ ಅಭಿಮಾನಿಗಳಿಗೆ ಎರಡು ಸಿನಿಮಾ ಕೊಡೋಕೆ ಪ್ಲಾ÷್ಯನ್ ಇದೆ. ಉಗ್ರಂ ವೀರಂ ಸಿನಿಮಾ ಬಗ್ಗೆಯೂ ಕೂಡಾ ನಟ ಶ್ರೀಮುರಳಿ ಮಾತಾಡಿದ್ದಾರೆ. ಪ್ರಶಾಂತ್ ನೀಲ್ ಬ್ಯುಸಿ ಇದ್ದಾರೆ, ನನಗೆ ಎರಡು ಸಿನಿಮಾ ಪ್ರಾಜೆಕ್ಟ್ ಇದೆ. ಮುಂದೆ ಆಥರದ ಘಳಿಗೆ ಕೂಡಿ ಬಂದಾಗ ನೋಡೋಣ, ಒಂದೊಳ್ಳೆ ಸಿನಿಮಾ ಕೊಡೋದಕ್ಕೆ ಟೈಂ ಹಿಡಿಯುತ್ತೆ ಎಂದಿದ್ದಾರೆ.

ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅನ್ನೋ ಕೂಗಿನ ಬಗ್ಗೆ ಮಾತನಾಡಿರುವ ನಟ ಶ್ರೀಮುರಳಿ, ನನಗೂ ವರ್ಷಕ್ಕೆ ಎರಡ್ಮೂರು ಸಿನಿಮಾ ಕೊಡೋಕೆ ಇಷ್ಟ. ಆದರೆ ಒಂದೊಳ್ಳೆ ಸಿನಿಮಾ ಮಾಡಬೇಕು ಅಂದಾಗ ಟೈಂ ಹಿಡಿಯುತ್ತೆ ಎಂದಿದ್ದಾರೆ. ಅದರ ಜೊತೆಗೆ 45 ಸಿನಿಮಾದಲ್ಲಿ ಶಿವಣ್ಣ ಗೆಟಪ್ ಬಗ್ಗೆ ಮಾತಾಡಿರುವ ಶ್ರೀಮುರಳಿ, ಅಷ್ಟು ಬ್ಯೂಟಿಫುಲ್ ಹುಡುಗಿ ನೋಡೋಕೆ ಚನ್ನಾಗಿದ್ದಾರೆ. ಶಿವಣ್ಣ ಮಾಮ ಅಂತ ನೋಡಿದ್ಮೇಲೆ ಖುಷಿಯಾಯ್ತು ಜೊತೆಗೆ ಶಾಕ್ ಆಯ್ತು ಎಂದಿದ್ದಾರೆ.

Share This Article