ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನ ನಿವಾಸದ ಮುಂದೆ ಅಭಿಮಾನಿಗಳ ಸಮ್ಮುಖದಲ್ಲಿ ಗ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟು ಇಡೀ ದಿನ ಅವರೊಂದಿಗೆ ಕಳೆದಿದ್ದಾರೆ. ಹುಟ್ಟುಹಬ್ಬದ ಈ ವೇಳೆ ದರ್ಶನ್ ಅಭಿಮಾನಿಗಳು (Darshan Fans) ಹಬ್ಬ ಮಾಡುವ ಸುದ್ದಿ ಕೊಟ್ಟಿದ್ದಾರೆ ರಚಿತಾ ರಾಮ್.
ರಚಿತಾ ರಾಮ್, ನಟ ದರ್ಶನ್ ಅವರ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ದರ್ಶನ್ ಕಳೆದ ಬಾರಿ ಜೈಲಿನಲ್ಲಿದ್ದಾಗ ಭೇಟಿ ಕೂಡಾ ಮಾಡಿ ಬಂದಿದ್ದರು. ತಮ್ಮ ಹುಟ್ಟುಹಬ್ಬದ ವೇಳೆ ಮತ್ತೆ ಅವರ ನೆನಪು ಮಾಡಿಕೊಂಡಿದ್ದಾರೆ ರಚಿತಾ. ಪ್ರತೀವರ್ಷ ದರ್ಶನ್ ಅವರಿಂದ ಬರುತ್ತಿದ್ದ ವಿಶ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇನ್ನು ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್
ಡೆವಿಲ್ ಸಿನಿಮಾದ (Devil Movie) ರಿಲೀಸ್ ವೇಳೆ ಚಿತ್ರದ ಪ್ರಚಾರಕ್ಕೆ ನಿಲ್ಲೋದಾಗಿ ನಟಿ ರಚಿತಾ ರಾಮ್ ಹೇಳಿದ್ದಾರೆ. ನನ್ನನ್ನು ಇಂಡಸ್ಟ್ರಿಗೆ ತಂದಿದ್ದೇ ದರ್ಶನ್ ಸರ್, ಅವರು ನಮ್ಮ ಗುರುಗಳು. ಅವರ ಸಿನಿಮಾ ರಿಲೀಸ್ ವೇಳೆ ಪ್ರಚಾರ ಮಾಡುತ್ತೇನೆ. ಆ ಚಿತ್ರತಂಡದ ಜೊತೆ ನಿಲ್ಲುತ್ತೇನೆ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಸುದ್ದಿ ಕೇಳಿದ ದಚ್ಚು ಫ್ಯಾನ್ಸ್ ಖುಷಿಯಿಂದ ಸಂಭ್ರಮಿಸಿದ್ದಾರೆ. ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಎಲ್ಲಾ ನಟರ ಅಭಿಮಾನಿಗಳು ಆಗಮಿಸಿ ರಚ್ಚು ಬರ್ತ್ಡೇ ಗ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ. ರಚಿತಾ ರಾಮ್ ಈ ವರ್ಷದ ತಮ್ಮ ಹುಟ್ಟು ಹಬ್ಬದ ವೇಳೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.