ಮೈಸೂರು: ರಾಜ್ಯಕ್ಕೆ ಬಂದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಕಿವಿಯಲ್ಲಿ ಏನು ಹೇಳಿದರು ಎಂಬ ಗುಟ್ಟನ್ನು ಸಿಎಂ ಸಿದ್ದರಾಮಯ್ಯ (Siddaramaiah) ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ, ಮಹಿಳಾ ಮೀಸಲಾತಿ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂದು ನನ್ನ ಕಿವಿಯಲ್ಲಿ ಪ್ರಧಾನಿ ಮೋದಿ ಕೇಳಿದರು. ನಾನು ಮಹಿಳಾ ಮೀಸಲಾತಿ ಪರವಾಗಿದ್ದೇನೆ ಎಂದು ಹೇಳಿದೆ ಅಂತಾ ಪಿಎಂ ಗುಟ್ಟನ್ನು ಸಿಎಂ ರಟ್ಟು ಮಾಡಿದ್ದಾರೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಸೋಲು ದ್ರೌಪದಿ ವಸ್ತ್ರಾಪಹರಣಕ್ಕೆ ಸಮ: ಯೋಗಿ ಆದಿತ್ಯನಾಥ್
ಇಡಿ ದಾಳಿ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಈ ವಿಚಾರ ನನಗೆ ಗೊತ್ತಿಲ್ಲ ಎಂದರು. ಪಂಚರಾಜ್ಯ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ತಮಿಳುನಾಡಿಗೆ ಪ್ರಚಾರಕ್ಕೆ ನಾನು ಹೋಗುವುದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಗೆಲ್ಲಬಹುದು. ಬಿಜೆಪಿಯವರು ಪಂಚರಾಜ್ಯ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿಗಳನ್ನ ನಕಲು ಮಾಡಿಕೊಂಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನ ಮೊದಲು ಬಿಜೆಪಿ ವಿರೋಧ ಮಾಡುತ್ತಿತ್ತು. ಈಗ ಇದನ್ನ ಅವರೇ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರುದ್ಧ ಇಲ್ಲ. ಕ್ಷೇತ್ರ ಪುನರ್ ವಿಂಗಡಣೆ ವಿಚಾರವಾಗಿ ಮಾತ್ರ ನಮ್ಮ ತಕರಾರು ಇದೆ. ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಮೀಸಲಾತಿ ಜಾರಿಯ ಬದ್ಧತೆ ಬಿಜೆಪಿಗೆ ಇಲ್ಲ. ವಿಧೇಯಕದ ವಿಚಾರದಲ್ಲಿ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದೆ. 2023 ಮೀಸಲಾತಿ ವಿಧೇಯಕ ಇತ್ತು. ಅದನ್ನ ಅವತ್ತೇ ಯಾಕೆ ಜಾರಿ ಮಾಡಬಾರದಿತ್ತು. ಈಗ ಕ್ಷೇತ್ರ ಪುನರ್ ವಿಗಂಡಣೆ ವಿಚಾರದಲ್ಲಿ ಯಾಕೆ ಅದನ್ನ ತಳುಕು ಹಾಕಿದ್ರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯಸಭಾ ಕಾರ್ಯದರ್ಶಿಯಾಗಿ ಕೋಲಾರದ ಸೋಮಶೇಖರ್ ನೇಮಕ – ಪ್ರತಿಷ್ಠಿತ ಸ್ಥಾನಕ್ಕೇರಿದ ಕರ್ನಾಟಕದ ಮೊದಲ ಅಧಿಕಾರಿ
ಹೊಸ ಜನಗಣತಿ ಪ್ರಕಾರ ಕ್ಷೇತ್ರ ಪುನರ್ ವಿಂಗಡಣೆಯಾಗಬೇಕು. ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಕ್ಷೇತ್ರ ಪುನರ್ ವಿಂಗಡಣೆ ಮುಖ್ಯ. ಹಳೆಯ ಜನಗಣತಿ ಪ್ರಕಾರ ಆದ್ರೆ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಯೇ ಇಲ್ಲ. ನಾವು ಇಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ನಮಗೆ ಇಲ್ಲಿ ಅನ್ಯಾಯ ಆಗಬಾರದು ಎಂದು ತಿಳಿಸಿದರು.

