ಟೈಗರ್ ಶ್ರಾಫ್ ಜೊತೆ ಬ್ರೇಕಪ್? ಹೊಸ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ದಿಶಾ

Public TV
2 Min Read

ಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಸೆಕ್ಸ್ ಎಲ್ಲವೂ ಕಾಮನ್. ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ (Disha Patani) ಡೇಟ್ ಮಾಡ್ತಿದ್ದರು ಎನ್ನಲಾಗಿತ್ತು. ಕೊವೀಡ್ ಸಂದರ್ಭದಲ್ಲಿ ಬ್ರೇಕಪ್ ಆಯ್ತು ಎಂದು ಹೇಳಲಾಯ್ತು. ಇಂದಿಗೂ ತಾವು ಸಂಬಂಧದಲ್ಲಿದ್ದ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಟೈಗರ್ ಶ್ರಾಫ್ ಜೊತೆ ಬ್ರೇಕಪ್ ಆಯ್ತಾ ಎಂಬ ಅನುಮಾನಗಳ ನಡುವೆ ನಟಿ ದಿಶಾ ಈಗ ಹೊಸ ಬಾಯ್‌ಫ್ರೆಂಡ್‌ನ ಪರಿಚಿಯಿಸಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

ದಿಶಾ ಪಟಾನಿ- ಟೈಗರ್ ಶ್ರಾಫ್ ಇಬ್ಬರು ಚಿತ್ರರಂಗದ ಸ್ಟರ‍್ಸ್. ಸಿನಿಮಾ ಮಾಡುವ ಮುಂಚೆಯೇ ಇಬ್ಬರಿಗೂ ಪರಿಚಯವಿತ್ತು. ಭಘಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರ ಗೆಳೆಯನವೇ ಪ್ರೇಮಾಂಕುರವಾಗಲು ಕಾರಣವಾಯ್ತು. ಕೊವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರೂ ಕಾರಿನಲ್ಲಿ ಸುತ್ತಾಟ ನಡೆಸಿದ್ದಕ್ಕೆ ಇವರ ಮೇಲೆ ಕೇಸ್ ಕೂಡ ದಾಖಲಾಗಿತ್ತು. ಆದರೆ, ಈ ಜೋಡಿ ಎಂದಿಗೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ದಿಶಾ ಪಟಾಣಿ ಅವರು ಅಲೆಕ್ಸಾಂಡರ್ ಅಲೆಕ್ಸಿಕ್ (Aleksander Alexilic) ಜೊತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಅನೇಕ ಬಾರಿ ದಿಶಾ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಇವರ ಮಧ್ಯೆ ಈಗ ಪ್ರೀತಿ ಮೂಡಿದೆಯೇ ಎನ್ನುವ ಅನುಮಾನ ಮೂಡಿದೆ. ದಿಶಾ ಪಟಾಣಿ ಹಾಗೂ ಅಲೆಕ್ಸಾಂಡರ್ ಒಂದು ಕಡೆ ಸೇರಿದ್ದರು. ಈ ವೇಳೆ ದಿಶಾ ತಮ್ಮ ಗೆಳೆತಿಯರಿಗೆ ಅಲೆಕ್ಸಾಂಡರ್‌ನ ಪರಿಚಯ ಮಾಡಿದ್ದಾರೆ. ಇವರು ನನ್ನ ಬಾಯ್‌ಫ್ರೆಂಡ್ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕೆಲ ದಿನಗಳ ಹಿಂದೆ ಟೈಗರ್ ಶ್ರಾಫ್ (Tiger Shroff) ಜೊತೆ ನಟಿ ದಿಶಾ (Disha) ಕಾಣಿಸಿಕೊಂಡಿದ್ದರು. ಕಾರ್ಯಕ್ರಮವೊಂದಲ್ಲಿ ಟೈಗರ್ ಮತ್ತು ಅವರ ಸಹೋದರಿ ಮತ್ತು ತಾಯಿಯ ಜೊತೆ ದಿಶಾ ಕಾರ್ಯಕ್ರಮ ವೀಕ್ಷಿಸುತ್ತಿರುವುದು ಕ್ಯಾಮೆರಾ ಕಣ್ಣಿಗೆ ಸೆರೆ ಆಗಿತ್ತು. ಬ್ರೇಕಪ್ ಮತ್ತು ಪ್ಯಾಚ್ ಅಪ್ ಸುದ್ದಿಯ ನಡುವೆ ಈಗ ಅಲೆಕ್ಯಾಂಡರ್ ಅಲೆಕ್ಸಿಕ್ ಎಂಬ ಹೊಸ ಬಾಯ್‌ಫ್ರೆಂಡ್‌ನ ಎಂಟ್ರಿಯಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಸುಳ್ಳಾ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್