ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತೆ: ಡಿಕೆ ಶಿವಕುಮಾರ್‌

Public TV
1 Min Read

ಬೆಂಗಳೂರು: ಅಸಮಾಧಾನ ಮಾಡಿಕೊಂಡರೆ ನಾನೇನು ಮಾಡಲು ಆಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (Dk Shivakumar) ಪ್ರತಿಕ್ರಿಯಿಸಿದ್ದಾರೆ.

ಹಲವು ಶಾಸಕರಿಗೆ ಮಂತ್ರಿ ಸ್ಥಾನ (Minister Post) ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ನಾನು ಸಾಕಷ್ಟು ಬಾರಿ ಅವಕಾಶ ವಂಚಿತನಾಗಿದ್ದೆ. ಧರಂ ಸಿಂಗ್‌, ಸಿದ್ದರಾಮಯ್ಯ ಸಂಪುಟದಲ್ಲಿ ನನಗೂ ಸಿಕ್ಕಿರಲಿಲ್ಲ. ನಾನು ತಾಳ್ಮೆಯಿಂದ ಕಾದಿದ್ದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

 

ಮಂತ್ರಿ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಮಾಡಿಕೊಂಡರೆ ನಾನು ಏನು ಮಾಡಲು ಆಗುತ್ತೆ? ಮಾತನಾಡುವವರು ಮಾತನಾಡಲಿ. ನಾನೇನು ಮಾತನಾಡುವುದಿಲ್ಲ ಎಂದರು.

ಕಳೆದ ಶನಿವಾರ ಕಂಠೀರವ ಸ್ಟೇಡಿಯಂನಲ್ಲಿ 10 ಮಂದಿ ಪ್ರಮಾಣ ವಚನ ಸ್ವೀಕರಿಸಿದರೆ ಇಂದು ರಾಜಭವನದಲ್ಲಿ ಗಾಜಿನ ಮನೆಯಲ್ಲಿ 24 ಮಂದಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.

Share This Article